ನೇಸರ ಫೆ.15: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಇದರ ವತಿಯಿಂದ ಫೆ.12ನೇ ಶನಿವಾರದಂದು ಪುತ್ತೂರು ಶಿವರಾಮಕಾರಂತ ಬಾಲವನದಲ್ಲಿ ನಡೆದ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದಲ್ಲಿ ಬೆಥನಿ ಪದವಿಪೂರ್ವ ಕಾಲೇಜು,ನೂಜಿಬಾಳ್ತಿಲದ ದ್ವಿತೀಯ ಪಿಯುಸಿ ಕಲಾವಿಭಾಗದ ವಿದ್ಯಾರ್ಥಿ ಕುಮಾರಿ.ದೀಪ್ತಿ.ಬಿ ರವರ “ಹೊಂಗನಸು” ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.
ಪುತ್ತೂರು ತಾಲೂಕಿನ ಶಾಸಕರಾದ ಸಂಜೀವ ಮಠಂದೂರು ಅವರು ಕವನ ಸಂಕಲನವನ್ನು ಬಿಡುಗಡೆ ಮಾಡಿ ಕಿರು ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿದ್ದಕ್ಕೆ ಮೆಚ್ಚುಗೆಯ ಮಾತನಾಡಿ ಶುಭಾಶಯ ಸಲ್ಲಿಸಿದರು. ದ.ಕ.ಕ.ಸಾ.ಪ ಅಧ್ಯಕ್ಷರಾದ ಎಂ.ಪಿ ಶ್ರೀನಾಥ್, ಪುತ್ತೂರು ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಐತಪ್ಪ ನಾಯಕ್ ಹಾಗೂ ಹಾಲಿ ಅಧ್ಯಕ್ಷ ಉಮೇಶ್ ನಾಯಕ್ ರವರು ಶುಭ ಹಾರೈಸಿದರು.ವೇದಿಕೆಯಲ್ಲಿ ಮುಳಿಯ ಕೇಶವ ಪ್ರಸಾದ್,ಕ.ಸಾ.ಪ ಜಿಲ್ಲಾ ಕಾರ್ಯದರ್ಶಿ ರಾಜೇಶ್ವರಿ,ಪುತ್ತೂರು ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುಮಾರಿ ದೀಪ್ತಿ ಅವರು ಮಾತನಾಡಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ,ಸಂಸ್ಥೆಯ ಸಂಚಾಲಕರ, ಪ್ರಾಂಶುಪಾಲರ, ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದದವರ ಸಂಪೂರ್ಣ ಸಹಕಾರದೊಂದಿಗೆ ಈ ಪುಸ್ತಕ ಅನಾವರಣಗೊಂಡಿದೆ. ಅಧ್ಯಾಪಕರಾದ ಬಿಜು ರವರ ಮಾರ್ಗದರ್ಶನದೊಂದಿಗೆ ಹಲವಾರು ಕವನ ಗಳು ಕೃತಿ ರೂಪದಲ್ಲಿ ಹೊರಬಂದಿದೆ ಎಂದು ಈ ಸಂದರ್ಭದಲ್ಲಿ ನುಡಿದರು.
—ಜಾಹೀರಾತು—