ಕಡಬ: ಟ್ರಾನ್ಸ್ ಫಾರ್ಮರಿನಿಂದ ಆಕಸ್ಮಿಕವಾಗಿ ಬಿದ್ದ ಬೆಂಕಿ, ಧಗ ಧಗನೆ ಹೊತ್ತಿ ಉರಿದ ಗುಡ್ಡ

ಶೇರ್ ಮಾಡಿ

ಇದೇನು ಮೊದಲ ಸಲ ಅಲ್ಲ, ಮೂರು ಬಾರೀ ಬೆಂಕಿ ಬಿದ್ದಿದೆ .                                                                                                                                                                     –  ಧ್ರುವರಂಜಿತ್ , ಶೋರೂಂ ನ ಸರ್ವಿಸ್ ಇಂಚಾರ್ಜ್ ಮೆನೇಜರ್ 

ನೇಸರ ಫೆ.14:ಕಡಬ ಸಮೀಪ ಕಳಾರ ಕಾರು ಶೋರೂಂ ಸಮೀಪ ಆಕಸ್ಮಿಕವಾಗಿ ಬೆಂಕಿ ಬಿದ್ದು ಗಾಳಿಯ ರಭಸಕ್ಕೆ ಗುಡ್ಡ ಪ್ರದೇಶ ಧಗಧಗನೆ ಹೊತ್ತಿ ಉರಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಟ್ರಾನ್ಸ್ ಫಾರ್ಮರಿನಿಂದ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುತ್ತ ಮುತ್ತಲಿನ ಹುಲ್ಲು ತುಂಬಿದ ಪ್ರದೇಶಕ್ಕೆ ಬೆಂಕಿ ಹಬ್ಬಿ ಗುಡ್ಡಕ್ಕೆ ಆವರಿಸಿಕೊಂಡಿದೆ. ಸ್ಥಳೀಯರು ಕೂಡಲೇ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಕ್ತಿ ಸಿಂಚನಗೈದ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇಗುಲ : ವೀಕ್ಷಿಸಿ, Subscribers ಮಾಡಿ

ಇದೇನು ಮೊದಲ ಸಲ ಅಲ್ಲ, ಮೂರು ಬಾರೀ ಬೆಂಕಿ ಬಿದ್ದಿದೆ:
ಕಳಾರ ಸಮೀಪದ ಗುಡ್ಡಕ್ಕೆ ಬೆಂಕಿ ಬೀಳುವುದು ಇದೇನು ಮೊದಲ ಸಲ ಅಲ್ಲ, ಮೂರು ಬಾರೀ ಬೆಂಕಿ ಬಿದ್ದಿದೆ. ಈ ಹಿಂದೆ ಬೆಂಕಿ ಬಿದ್ದಾಗ ಸ್ಥಳೀಯರ ಜೊತೆಗೆ ಶೋರೂಂ ನ ಸಿಬ್ಬಂದಿಗಳು ಕರ್ತವ್ಯದ ನಡುವೆಯೂ ಬೆಂಕಿ ನಂದಿಸಿದ್ದರು. ಈ ಬಾರಿಯೂ ಕೂಡ ಬೆಂಕಿಬಿದ್ದ ತಕ್ಷಣ ಮೊದಲಿಗೆ ನಮ್ಮ ಸಿಬ್ಬಂದಿಗಳೇ ತೆರಳಿ ಬೆಂಕಿಯನ್ನು ನಂದಿಸಿ ಬಂದಿರುತ್ತಾರೆ. ತದನಂತರ ಬೆಂಕಿ ಆವರಿಸಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ ಎಂಬುದಾಗಿ ಶೋರೂಂ ನ ಸರ್ವಿಸ್ ಇಂಚಾರ್ಜ್ ಮೆನೇಜರ್ ಧ್ರುವರಂಜಿತ್ ತಿಳಿಸಿದರು.

—-ಜಾಹೀರಾತು—

 

Leave a Reply

error: Content is protected !!