ನೆಟ್ಟಣ : ಕಾರ್ಗಿಲ್ ವಿಜಯ ದಿವಸ ಆಚರಣೆ

ಶೇರ್ ಮಾಡಿ

ನೆಟ್ಟಣ ಸೈoಟ್ ಮೇರಿಸ್ ಚರ್ಚ್ ನಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಜನಸಾಮಾನ್ಯ ಸಂಘಟನೆಯಾದ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಕಾರ್ಗಿಲ್ ವಿಜಯ ದಿವಸ ಆಚರಣೆ ನಡೆಯಿತು.

ನೆಟ್ಟಣ ಘಟಕ ಅಧ್ಯಕ್ಷ ರಾಜೇಶ್ ಪಿ.ಜೆ ಹಾಗೂ ಸದಸ್ಯರು ನೆಟ್ಟಣ ಧರ್ಮಕೇಂದ್ರದ ಸದಸ್ಯರರಾದ ಮಾಜಿ ಸೈನಿಕ ಜಾನ್ ವರ್ಗಿಸ್, ಜೋಸೆಫ್ ಚೆರಿಯನ್, ಅಲೆಕ್ಸಾoಡರ್, ಮ್ಯಾಥು, ಜೇಮ್ಸ್ ಚೆರಿಯಾನ್, ಜೇಮ್ಸ್,ಜೋಮೀನ್, ರಾಜೇಶ್ ಇವರುಗಳನ್ನು ಶಾಲು ಹೊದಿಸಿ ಗೌರವಿಸಲಾಯಿತ್ತು.

ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಜೀವ ತ್ಯಾಗ ಮಾಡಿದ ಸೈನಿಕರ ಗೌರವಾರ್ಥ ಒಂದು ನಿಮಿಷ ಮೌನ ಪ್ರಾರ್ಥನೆ ನಡಸಲಾಯಿತ್ತು.

ಕಾರ್ಯಕ್ರಮದಲ್ಲಿ ಕೆ.ಎಸ್.ಎಂ.ಸಿ.ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಇದರ ನಿರ್ದೇಶಕ ಫಾ.ಆದರ್ಶ್ ಜೋಸೆಫ್ ಹಾಗೂ ಕೇಂದ್ರ ಸಮ್ಮಿತಿ ಅಧ್ಯಕ್ಷ ಬಿಟ್ಟಿ.ಬಿ.ನೆಡುನಿಲಂ ಹಾಗೂ ಸದಸ್ಯರು ಭಾಗವಹಿಸಿದರು. ರಾಜೇಶ್.ಪಿ. ಜೆ ಸ್ವಾಗತಿಸಿದರು., ವಿಜೇಶ್ ನಿರೂಪಿಸಿದರು.

Leave a Reply

error: Content is protected !!