ಜೇಸಿಐ ಕೊಕ್ಕಡ ಕಪಿಲಾ : ಘಟಕಾಭಿವೃದ್ಧಿ ಮತ್ತು ನಿರ್ವಹಣಾ ತರಬೇತಿ

ಶೇರ್ ಮಾಡಿ

ನೇಸರ ಫೆ.24: ಜೇಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಫೆ.23 ರಂದು ಮರಿಯ ಕೃಪಾ ಕಾಂಪ್ಲೆಕ್ಸ್ ಕೊಕ್ಕಡದಲ್ಲಿ ಘಟಕದ ಪದಾಧಿಕಾರಿಗಳಿಗೆ ಘಟಕ ಅಭಿವೃದ್ಧಿ ಮತ್ತು ನಿರ್ವಹಣಾ ತರಬೇತಿಯ ಕುರಿತು ಕಾರ್ಯಗಾರ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಜೇಸಿ.ಶ್ರೀಧರ್ ರಾವ್ ರವರು ವಹಿಸಿದ್ದರು.ತರಬೇತುದಾರರಾಗಿ ವಲಯ ಉಪಾಧ್ಯಕ್ಷರಾದ ಜೇಸಿ.JFD.ರವಿಚಂದ್ರ ಪಾಟಾಳಿ ನಡೆಸಿಕೊಟ್ಟರು.ಜೇಸಿ ವಾಣಿಯನ್ನು ಜಸ್ವಂತ್ ಪಿರೇರಾ ವಾಚಿಸಿದರು.ಜೇಸಿ.HGF.ಜೋಸೆಫ್ ಪಿರೇರಾ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ವಲಯ ಉಪಾಧ್ಯಕ್ಷರನ್ನು ಸಭೆಗೆ ಜೇಸಿ.ಜಿತೇಶ್ ಪಿರೇರಾ ಪರಿಚಯಿ ಸಿದರು.ವೇದಿಕೆಯಲ್ಲಿ ವಲಯಾಧಿಕಾರಿ ಜೇಸಿ.ಪ್ರಶಾಂತ್.ಸಿ.ಎಚ್, ಪೂರ್ವಾಧ್ಯಕ್ಷರಾದ ಜೇಸಿ.ಗಣೇಶ್ ಉಪಸ್ಥಿತರಿದ್ದರು. ಧನ್ಯವಾದ ಕಾರ್ಯದರ್ಶಿ ಜೇಸಿ. ನರಸಿಂಹ ನಾಯಕ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಘಟಕಾಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

 

—ಜಾಹೀರಾತು—

Leave a Reply

error: Content is protected !!