ನೆಲ್ಯಾಡಿ: ಸಂಜೀವ ನಾಯ್ಕರಿಗೆ ಸೂರು ಕೊಟ್ಟ ನಿವೃತ್ತ ಪೊಲೀಸ್ ಅಧಿಕಾರಿ ವೇಶ್ನಾಲ್ ಈಪನ್ ವರ್ಗೀಸ್

ಶೇರ್ ಮಾಡಿ

ನೇಸರ ಫೆ.25: ಕೊಣಾಲು ಗ್ರಾಮದ ಕುಮೇರು ಸಂಜೀವ ನಾಯ್ಕರ ಬಡಕುಟುಂಬ ಕಳೆದ ವರ್ಷ ಮಳೆಗಾಲದಲ್ಲಿ ಇವರ ಮನೆ ಕುಸಿಯಿತು, ಪ್ಯಾರಲಿಸಿಸ್ ಪೀಡಿತ ತಂದೆ ಮತ್ತು ತಾಯಿ,ಸಣ್ಣ ಮಗು ಮತ್ತು ಹೆಂಡತಿಯೊಂದಿಗೆ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸಿದ್ದವರು. ಸ್ವಂತ ಮನೆ ಕಟ್ಟುವ ಚೈತನ್ಯವಿರದ ಸಂಜೀವ ನಾಯ್ಕರ ಅಸಾಯಕ ಸ್ಥಿತಿಗೆ ಮರುಗಿದ ಸಾಮಾಜಿಕ ಕಳಕಳಿಯುಳ್ಳ ನಿವೃತ್ತ ಪೊಲೀಸ್ ಅಧಿಕಾರಿ ಕೋಣಾಲು ಮರಿಯಾ ಕೃಪಾ ನಿವಾಸಿ ವೇಶ್ನಾಲ್ ಈಪನ್ ವರ್ಗೀಸ್ ರವರು ಮನೆಯನ್ನು ನಿರ್ಮಿಸಿ ಫೆ.24 ರಂದು ಸರಳ ಸಮಾರಂಭದಲ್ಲಿ ನೆಲ್ಯಾಡಿ ಅಲ್ಫೋನ್ಸಾ ಚರ್ಚಿನ ಧರ್ಮಗುರು ಬಿನೋಯಿ ಕುರಿಯಾಳ್ ಶೇರಿಯವರು ಮಾತನಾಡಿ ಇಂದು ಗುರು-ಹಿರಿಯರನ್ನು ಆರಾಧಿಸುವ ಸನ್ನಡತೆಯ ಸಂಜೀವ ನಾಯ್ಕ ಅವರ ಸನ್ನಡತೆಗೆ ಒಲಿದ ಯೋಗ ಅವರ ಬಾಳಿನಲ್ಲಿ ಮುಂದಕ್ಕೆ ಶುಭವಾಗಲಿ ಎಂದು ಹಾರೈಸಿದರು.ರಿಬ್ಬನ್ ಕಟ್ ಮಾಡುವ ಮೂಲಕ ಗೋಳಿತೊಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಗೌಡ ಮನೆಯನ್ನು ಉದ್ಘಾಟಿಸಿದರು.

ಸದ್ಭಾವನಾ ಸಮಾವೇಶ ವೀಕ್ಷಿಸಿ Subscribers ಮಾಡಿ

ಮನೆಯನ್ನು ನಿರ್ಮಿಸಿ ಕೊಟ್ಟ ವೇಶ್ನಾಲ್ ಈಪನ್ ವರ್ಗೀಸ್ ರವರು ಸಂಜೀವ ನಾಯ್ಕರ ಕುಟುಂಬಕ್ಕೆ ಮನೆಯ ಕೀಲಿಕೈಯನ್ನು ಹಸ್ತಾಂತರಿಸಿದರು. ಕೋಣಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಲತಾ,ಗ್ರಾಮ ಪಂಚಾಯತ್ ಸದಸ್ಯರಾದ ವಿ.ಸಿ ಜೋಸೆಫ್, ಶ್ರೀಮತಿ ಜಾನಕಿ,ಸಿಸ್ಟರ್ ಲಿಸ್ಸಿ ಮ್ಯಾಥ್ಯೂ, ಸಂದರ್ಭೋಚಿತವಾಗಿ ಮಾತನಾಡಿ ಶುಭವನ್ನು ಹಾರೈಸಿದರು.ಫಾದರ್ ಜಿನ್ಸನ್, ಮ್ಯಾಕ್ಸಿ ಮೇರಿ,ಎ.ಜೆ ಜೋಸ್,ಅಲ್ಫೋನ್ಸ ಚರ್ಚಿನ ಸದಸ್ಯರಾದ ಬಿನೋಯಿ, ಸೆಬಾಸ್ಟಿನ್, ಸಂಜೀವ ನಾಯ್ಕರ ಮಾತೃಶ್ರೀ ಯಮುನಾ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

—ಜಾಹೀರಾತು—

 

Leave a Reply

error: Content is protected !!