ನೆಲ್ಯಾಡಿ: ಉದನೆ ಸಮೀಪದ ಕುದುಕ್ಕೋಳಿ ನಿವಾಸಿ ಉದನೆ ಸೈಂಟ್ ಆಂಟನೀಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಂಕೇತ್, ಅನಾರೋಗ್ಯದ ಕಾರಣದಿಂದಾಗಿ ಸೋಮವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಮೃತಪಟ್ಟಿರುತ್ತಾನೆ.
ಮೃತರಿಗೆ ತಂದೆ,ತಾಯಿ ಹಾಗೂ ಓರ್ವ ಸಹೋದರ ಇದ್ದಾರೆ. ನಿರ್ದೇಶಕರಾದ ಬಿಷಪ್ ಯಾಕೂಬ್ ಮೊರ್ ಅಂತೋನಿಯಾಸ್, ಸಂಚಾಲಕರಾದ ರೆ.ಫಾ ಹನಿ ಜೇಕಬ್, ಮೆನೇಜರ್ ಸನ್ನಿ ಜಾನ್, ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿ ವಿದ್ಯಾರ್ಥಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ