ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಕೆರ್ನಡ್ಕ ನಿವಾಸಿ, ಕೊಣಾಲು ಗ್ರಾಮದ ಪಾಂಡಿಬೆಟ್ಟು ಶ್ರೀ ನಾರಾಯಣ ಗುರುಮಂದಿರದ ಅಧ್ಯಕ್ಷ ಹಾಗೂ ಅರ್ಚರಕಾದ ಶಶಿಧರನ್ ಎನ್(63) ಅವರು ಹೃದಯಾಘಾತದಿಂದ ಅ.21 ರಂದು ನಿಧನರಾದರು.
ಇವರು ಹಲವಾರು ವರ್ಷಗಳಿಂದ ಪಾಂಡಿಬೆಟ್ಟು ಶ್ರೀ ನಾರಾಯಣ ಗುರುಮಂದಿರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ನೀತಿ ಸಾಮಾಜಿಕ ಸಂಘಟನೆಯ ನೆಲ್ಯಾಡಿ ವಲಯದ ಸಕ್ರಿಯ ಕಾರ್ಯಕರ್ತರಾಗಿದ್ದರು.
ಏಕಾಏಕಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಅದಾಗಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಚೆನ್ನಮ್ಮ, ಪುತ್ರರಾದ ಸುಭಾಷ್, ಸುನೀಶ್, ಸುಧೀಶ್ ಹಾಗೂ ಸೊಸೆಯಂದಿರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಕಾರ್ಯಗಳು ಸ್ವಗೃಹದಲ್ಲಿ ನಡೆಯಿತು. ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಂದಾಳುಗಳು, ಸಾರ್ವಜನಿಕರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.