
ಕೊಕ್ಕಡ: ಕನ್ಯಾಡಿ ಸೇವಾಭಾರತಿ(ರಿ.), ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶಿಶಿಲ ವೈಕುಂಠಪುರ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ಮತ್ತು ಗ್ರಾ.ಪಂ ಶಿಶಿಲ ಇವುಗಳ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 29ನೇ ಒಂದು ತಿಂಗಳ ಉಚಿತ ಟೈಲರಿಂಗ್ ತರಬೇತಿ ಶಿಬಿರವು ಶಿಶಿಲ ವೈಕುಂಠಪುರ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ಕಟ್ಟಡದಲ್ಲಿ ಅ.22ರಂದು ಉದ್ಘಾಟನೆಗೊಂಡಿತು.
ಶಿಶಿಲ ಟೈಲರಿಂಗ್ ತರಬೇತುದಾರ ವಿನಯ ಶೆಂಡ್ಯ, ಬಂಡಿಹೊಳೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕನ್ಯಾಡಿ ಸೇವಾ ಭಾರತಿ ಇದರ ಟ್ರಸ್ಟಿ ಕೃಷ್ಣಪ್ಪ ಗುಡಿಗಾರ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಶಿಶಿಲ ವೈಕುಂಠಪುರ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಅಧ್ಯಕ್ಷ ಹರೀಶ್ ಕೊಳಂಬೆ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಯಶೋಧ ಸ್ವಾಗತಿಸಿದರು. ಸೇವಾ ಭಾರತಿಯ ಸುಮಾ ಕಾರ್ಯಕ್ರಮ ನಿರೂಪಿಸಿ, ಚಂದನ್ ಗುಡಿಗಾರ್ ವಂದಿಸಿದರು.





