
ಕೊಕ್ಕಡ : ಅರಸಿನಮಕ್ಕಿ ಹತ್ಯಡ್ಕ ಗ್ರಾಮದ ಶ್ರೀಕಾಲಭೈರವ ಸ್ವಾಮಿ ಮತ್ತು ಶ್ರೀಮಾರಿ ಅಮ್ಮನವರ ಮಾರಿಗುಡಿ ಶ್ರೀ ಕ್ಷೇತ್ರ ತುಂಬೆತಡ್ಕದಲ್ಲಿ ವಾರ್ಷಿಕ ಮಾರಿ ಪೂಜಾ ಉತ್ಸವ ಜ.28ರಂದು ಜರಗಿತು.

ಬೆಳಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಕೋಲು ಪೂಜೆ ಮತ್ತು ಕೋಲಾಟರಾತ್ರಿ ಗಂಟೆ 8ಕ್ಕೆಆಡಳಿತ ಮೊಕ್ತೇಸರರ ಮನೆಯಿಂದ ಶ್ರೀದೇವರುಗಳ ಭಂಡಾರ ತರಲಾಯಿತು. ಜ.29ರಂದು ಬೆಳಗ್ಗೆ ಪಾತ್ರಿಗಳ ದರ್ಶನದೊಂದಿಗೆ ಶ್ರೀ ದೇವರುಗಳ ಬಲಿ ಉತ್ಸವ ಮತ್ತು ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಸುರೇಶ್.ವಿ, ಕಾರ್ಯದರ್ಶಿ ಪ್ರೇಮಚಂದ್ರ.ಎಸ್ ಆಡಳಿತ ಮೊಕ್ತೇಸರರಾದ ಶ್ರೀಮತಿ ಪರಮೇಶ್ವರಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.






