
ಉಜಿರೆ: ಕಾರ್ಕಳ ಸಾಮಾಜಿಕ ಅರಣ್ಯದಲ್ಲಿ ಉಪ ವಲಯಅರಣ್ಯಾಧಿಕಾರಿಯಾಗಿರುವ ಲೋಕೇಶ್(55) ಹೃದಯಾಘಾತದಿಂದ ಇಂದು(ಫೆ.10)ಬೆಳಗ್ಗೆ ನಿಧನರಾದರು.

ಮೃತರು ಮೂಲತಃ ಶಿವಮೊಗ್ಗದವರಾಗಿದ್ದು ಪ್ರಸ್ತುತ ಉಜಿರೆ ಸಮೀಪದ ಪೆರ್ಲ ಎಂಬಲ್ಲಿ ನೆಲೆಸಿದ್ದಾರೆ. ಅವರು ಸುಮಾರು ಹತ್ತು ವರ್ಷಗಳಷ್ಟು ಕಾಲ ಕೊಕ್ಕಡ ದಲ್ಲಿ ಹಾಗೂ 6 ವರ್ಷಗಳಷ್ಟು ಬೆಳಾಲ್ ನಲ್ಲಿ ಉಪ ವಲಯಅರಣ್ಯಾಧಿಕಾರಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ಕಾರ್ಕಳ ಸಾಮಾಜಿಕ ಅರಣ್ಯಕ್ಕೆ ಉಪ ವಲಯಅರಣ್ಯಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.

ಮೃತರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ





