
ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿನ ವತಿಯಿಂದ ಟೇಬಲ್, ಕುರ್ಚಿ ವಿತರಣೆ ಹಾಗೂ ದಾರಿದೀಪ ಅಳವಡಿಸಿ ಉದ್ಘಾಟನೆ ಫೆ.9ರಂದು ನೆರವೇರಿತು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನರಿಗೆ ಗ್ರಾಮ ಪಂಚಾಯಿತಿನ ಅನುದಾನದಲ್ಲಿ ಸುಮಾರು 70 ಕುಟುಂಬಗಳಿಗೆ ಟೇಬಲ್ ಮತ್ತು ಕುರ್ಚಿ ವಿತರಿಸಲಾಯಿತು ಅಲ್ಲದೆ ಸುಮಾರು 2.50 ಲಕ್ಷ ವೆಚ್ಚದಲ್ಲಿ ಕಲ್ಲಚಡವು ನಿಂದ ಪಡುಬೆಟ್ಟು ಅಂಗನವಾಡಿಯ ವರೆಗೆ ದಾರಿದೀಪವನ್ನು ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಸಲಾಂ ಬಿಲಾಲ್, ಮುಖ್ಯ ಅತಿಥಿಗಳಾಗಿ ಮಾಲಿಂಗ ಮಾಸ್ಟರ್, ನಿವೃತ್ತ ಟೆಲಿಕಾಂ ಅಧಿಕಾರಿ ಡಾಕಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಪುಷ್ಪ, ಜಯಲಕ್ಷ್ಮಿಪ್ರಸಾದ್, ಪಿಡಬ್ಲ್ಯೂಡಿ ಗುತ್ತಿಗೆದಾರ ಶಿವ ಪ್ರಕಾಶ್, ಸಮಿರುದ್ದೀನ್, ಉದ್ಯಮಿ ಹನೀಫ್.ಯು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಸಿಬ್ಬಂದಿ ಶಿವಪ್ರಸಾದ್ ಸ್ವಾಗತಿಸಿದರು.






