


ನೆಲ್ಯಾಡಿ: ಭರವಸೆಯ ಬೆಳಕು ಸಮಿತಿ ಕೋಲ್ಪೆ ಇದರ ವತಿಯಿಂದ ಇಫ್ತಾರ್ ಸಂಗಮ ಹಾಗೂ ಅಗಲಿದ ಹಿರಿಯರ ಅನುಸ್ಮರಣಾ ಕಾರ್ಯಕ್ರಮ ನೆಲ್ಯಾಡಿ-ಕೋಲ್ಪೆ ಬದ್ರಿಯಾ ಜುಮಾ ಮಸೀದಿಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು ೫೦೦ ಮಂದಿಯ ಉಪವಾಸಿಗರ ಇಫ್ತಾರ್ ಕೂಟ ನಡೆಸಲಾಯಿತು. ಜೊತೆಗೆ ಜಮಾಅತ್ನಲ್ಲಿ ಅಗಲಿದವರ ಮೇಲೆ ಸಾಮೂಹಿಕ ತಹ್ಲೀಲ್ ಝಿಕ್ರ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ಕೋಲ್ಪೆ ಮುದರ್ರಿಸ್ ಬಹು| ಅಲ್ಹಾಜ್ ಇಸಾಕ್ ಫೈಝಿ ಉಸ್ತಾದ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹನೀಫ್ ದಾರಿಮಿ ಕುಂತೂರು, ಮುಹಮ್ಮದ್ ಮುಸ್ಲಿಯಾರ್ ಉಪ್ಪಿನಂಗಡಿ, ಹಾರಿಸ್ ಮುಸ್ಲಿಯಾರ್ ತುರ್ಕಳಿಕೆ, ಕೋಲ್ಪೆ ಮಸೀದಿ ಅಧ್ಯಕ್ಷರಾದ ಕೆ.ಕೆ.ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಸಮೀರ್ ಅರ್ಶದಿ, ಗೋಳಿತ್ತೊಟ್ಟು ಮಸೀದಿ ಅಧ್ಯಕ್ಷರಾದ ಆರಿಫ್ ಎಚ್., ನ್ಯಾಯವಾದಿ ಇಸ್ಮಾಯಿಲ್ ಎನ್., ಖಲಂದರ್ ಶಾ ದಪ್ ಸಮಿತಿ ಅಧ್ಯಕ್ಷರಾದ ಕೆ.ಎಂ.ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ಇಸ್ಮಾಯಿಲ್ ಹಾಜಿ, ಕೋಶಾಧಿಕಾರಿ ಸಲೀಂ ಎಂ.ಕೆ., ಭರವಸೆಯ ಬೆಳಕು ಸಮಿತಿ ಅಧ್ಯಕ್ಷರಾದ ಎಸ್.ಕೆ.ರಝಾಕ್, ಪ್ರಧಾನ ಕಾರ್ಯದರ್ಶಿ ಯು.ಕೆ ಉಮ್ಮರ್, ಕೋಶಾಧಿಕಾರಿ ಶಫೀಕ್, ಎಸ್ಎಂಕೆ ಸಮಿತಿಯ ಗೌರವಾಧ್ಯಕ್ಷ ಇಕ್ಬಾಲ್ ಎಸ್., ಉಪಾಧ್ಯಕ್ಷರಾದ ಶುಕೂರು ಕೆ.ಜಿ.ಎನ್., ಎಸ್ಕೆಎಸ್ಎಸ್ಎಫ್ ಈಸ್ಟ್ ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ಪೆ, ಮಜೀದ್ ಫೈಝಿ ಕೋಲ್ಪೆ, ಎಸ್ಕೆಎಸ್ಎಸ್ಎಫ್ ಅಧ್ಯಕ್ಷರಾದ ರಹೀಂ ಎಂ.ಕೆ. ಹಾಗೂ ಭರವಸೆಯ ಬೆಳಕು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ರಹೀಂ ಎಂ.ಕೆ. ಹಾಗೂ ಭರವಸೆಯ ಬೆಳಕು ಸಮಿತಿಯ ಎಲ್ಲಾ ಸದಸ್ಯರು, ಅತಿಥಿಗಳನ್ನು ಹಾಗೂ ಉಪವಾಸಿಗರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಲವಾರು ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗಿತ್ತು, ಭಾಗವಹಿಸಿದ ಎಲ್ಲರಿಗೂ ಸ್ಮರಣೀಯ ಅನುಭವ ನೀಡಲಾಯಿತು.





