ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ಮಹಿಳಾ ದಿನಾಚರಣೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣ, ಸ್ವಾವಲಂಬನೆ ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚೆಗಳು ನಡೆಯುವ ಜೊತೆಗೆ, ಮಹಿಳಾ ಸಹಕಾರಿ ಸಂಘಗಳ ಮಹತ್ವವನ್ನು ವಿವರಿಸಲಾಯಿತು.

ಪುತ್ತೂರು ಮುತ್ತು ಲಯನ್ಸ್ ಕ್ಲಬ್ ಅಧ್ಯಕ್ಷೆ ವೇದಾವತಿ ರಾಜೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ಮಹಿಳೆಯರು ಕೇವಲ ಮನೆಯ ಗಡಿಯಲ್ಲಿರದೇ, ಸಮಾಜದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮೂಲಕ ತಮ್ಮ ಗುರುತನ್ನು ನಿರ್ಮಿಸಿಕೊಳ್ಳಬೇಕು. ಮಹಿಳಾ ಸಹಕಾರಿ ಸಂಘಗಳು ಸರಿಯಾದ ಯೋಜನೆ ಮತ್ತು ಆಡಳಿತದೊಂದಿಗೆ ಉತ್ತಮ ಲಾಭಾಂಶದೊಂದಿಗೆ ಯಶಸ್ವಿಯಾಗಬಹುದು. ಇದಕ್ಕೆ ಉತ್ತಮ ಉದಾಹರಣೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘ,” ಎಂದು ಅವರು ಅಭಿಪ್ರಾಯಪಟ್ಟರು. “ಮಹಿಳೆಯರಿಗೆ ಸರಕಾರ ಶೇಕಡಾ 33 ರಷ್ಟು ಮೀಸಲಾತಿ ನೀಡಿದೆ. ಆದರೆ, ಈ ಮೀಸಲಾತಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಮಹಿಳೆಯರು ಕುಟುಂಬದಲ್ಲಿ ತಾಯಿ, ಮಗಳು, ಹೆಂಡತಿ, ಅಜ್ಜಿ ಹೀಗೆ ಹಲವಾರು ಹುದ್ದೆಗಳನ್ನು ನಿಭಾಯಿಸುತ್ತಾರೆ. ಅವರ ಹಕ್ಕುಗಳು ಮತ್ತು ಅವಕಾಶಗಳು ಸಮರ್ಪಕವಾಗಿ ಒದಗಿಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ,” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಉಷಾ ಅಂಚನ್ ವಹಿಸಿದ್ದರು. ವೇದಿಕೆಯಲ್ಲಿ ಬ್ಯಾಂಕಿನ ನಿರ್ದೇಶಕಿಯರಾದ ವಿನುತ, ಮೈತ್ರಿ ಮತ್ತಿತರರು ಉಪಸ್ಥಿತರಿದ್ದರು.

ಚಿನ್ನದ ಬೆಲೆ ಏರಿಕೆ ವಿರುದ್ಧ ಮಹಿಳೆಯರ ಪ್ರತಿಭಟನೆ:
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಅತಿಯಾಗಿ ಏರಿಕೆ ಕಂಡಿರುವುದರಿಂದ, ಮಹಿಳೆಯರು ಮೆರವಣಿಗೆಯ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಘೋಷಣೆಗಳನ್ನು ಕೂಗುತ್ತಾ, ದರ ಇಳಿಕೆಯ ಆಗ್ರಹವನ್ನು ಅವರು ಒತ್ತಿಹೇಳಿದರು.

ದಿವ್ಯ ಪ್ರಾರ್ಥಿಸಿದರು, ಶ್ವೇತ ಸ್ವಾಗತಿಸಿದರು, ಸಂಘದ ಕಾರ್ಯನಿರ್ವಾಹಕ ಚೈತನ್ಯ ನಿರೂಪಿಸಿದರು, ರಶ್ಮಿತಾ ವಂದಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರು, ಕಚೇರಿ ಸಿಬ್ಬಂದಿ, ಸಂಘದ ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.

  •  

Leave a Reply

error: Content is protected !!