


ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ನಾಗಪ್ಪ ಗೌಡ ಆರ್. ಅವರ ಮಾರ್ಗದರ್ಶನದಲ್ಲಿ ಶ್ರೀಮತಿ ಹೇಮಾವತಿ ಸಂಶೋಧನಾ ಮಹಾಪ್ರಬಂಧವನ್ನು ಯಶಸ್ವಿಯಾಗಿ ಸಲ್ಲಿಸಿದ್ದಾರೆ.

“ಪ್ರಭಾಕರ ನೀರ್ಮಾರ್ಗ ಅವರ ಕಾದಂಬರಿಗಳಲ್ಲಿ ಪ್ರಾದೇಶಿಕ ಸಂಸ್ಕೃತಿಯ ಪ್ರತಿನಿಧಿಕರಣ” ಎಂಬ ವಿಷಯದ ಮೇಲೆ ಅವರು ಪ್ರೌಢ ಸಂಶೋಧನೆ ನಡೆಸಿ, ಅದನ್ನು ಸಾದರಪಡಿಸಿದ್ದು, ಈ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ ಪದವಿಯನ್ನು ಪ್ರದಾನ ಮಾಡಿದೆ.
ಕೊಣಾಜೆ ಗ್ರಾಮದ ದಿ. ಅಣ್ಣಪ್ಪ ಮೂಲ್ಯ ಮತ್ತು ಸೇಸಮ್ಮ ದಂಪತಿಯ ಪುತ್ರಿಯಾಗಿರುವ ಹೇಮಾವತಿ, ಉಪ್ಪಿನಂಗಡಿಯ ಮಾಜಿ ಸೈನಿಕ ಹಾಗೂ ಬ್ಯಾಂಕ್ ಉದ್ಯೋಗಿ ಕೆ. ವಾಮನ ಅವರ ಪತ್ನಿ. ಅವರ ಈ ಸಾಧನೆಗೆ ಕುಟುಂಬದವರು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಗುರುಗಳು ಅಭಿನಂದನೆ ಸಲ್ಲಿಸಿದ್ದಾರೆ.




