ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ದೇವಳದ ಗೌರವಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಸಂಪುಟ ನರಸಿಂಹಸ್ವಾಮಿ ಮಠ ಸುಬ್ರಮಣ್ಯ ಇವರ ಕೃಪಾಶೀರ್ವಾದದೊಂದಿಗೆ ಶನಿವಾರ ಶನೈಶ್ಚರ ಪೂಜೆ ನಡೆಯಿತು.

ಪೂಜಾ ಕಾರ್ಯಗಳನ್ನು ವೇದಮೂರ್ತಿ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಸುಳ್ಯ ಅವರ ಪೌರೋಹಿತ್ಯದಲ್ಲಿ ನೆರವೇರಿಸಲಾಯಿತು. ಶನೈಶ್ಚರನ ಅನುಗ್ರಹದಿಂದ ಭಕ್ತರಲ್ಲಿ ಶಾಂತಿ, ಸಮೃದ್ಧಿ ಮತ್ತು ಶಕ್ತಿಯ ಪ್ರಭಾವ ಹೆಚ್ಚಳವಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ಸುಧೀರ್ ಕುಮಾರ್. ಕೆ.ಎಸ್, ಉಪಾಧ್ಯಕ್ಷರಾದ ರವಿಚಂದ್ರ ಹೊಸವಕ್ಲು, ಕಾರ್ಯದರ್ಶಿ ವಿನೋದ್ ಕುಮಾರ್. ಗೌರವ ಸಲಹೆಗಾರದ ಶಿವದಾಸ್, ದೇವಸ್ಥಾನದ ಅರ್ಚಕರಾದ ಶ್ರೀಧರ ನೂಜಿನ್ನಾಯ, ಅಶ್ವಥ್ ನಾರಾಯಣ ಹಾಗೂ ಆಡಳಿತ ಸಮಿತಿಯ ಸದಸ್ಯರು, ಭಕ್ತಾದಿಗಳು ಶ್ರದ್ಧಾಪೂರ್ವಕವಾಗಿ ಶನೈಶ್ಚರ ದೇವರ ಪೂಜೆಯಲ್ಲಿ ಭಾಗವಹಿಸಿ, ಪ್ರಸಾದ ಸ್ವೀಕರಿಸಿ ಆಧ್ಯಾತ್ಮಿಕ ಶಾಂತಿಯನ್ನು ಅನುಭವಿಸಿದರು.

  •  

Leave a Reply

error: Content is protected !!