

ಕನ್ಯಾಡಿ: ಮಂಗಳೂರು ಸ್ಥಿತಿಯ CR3 (India) Private Limited ಕಂಪೆನಿಯ ಸೀನಿಯರ್ ಎಚ್.ಆರ್. ಎಕ್ಸಿಕ್ಯೂಟಿವ್ ಗಣೇಶ ಟಿ ಅವರು ಸೇವಾನಿಕೇತನಕ್ಕೆ ಭೇಟಿಕೊಟ್ಟು, ಬೆನ್ನುಹುರಿ ಅಪಘಾತದಿಂದ ದಿವ್ಯಾಂಗರಾಗಿರುವವರಿಗೆ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಕಂಪೆನಿಯಿಂದ ರೂ. 5,00,000/- ರ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅವರು ಕಟ್ಟಡದ ನಿರ್ಮಾಣ ಶೀಘ್ರವಾಗಲಿ ಎಂದು ಶುಭಹಾರೈಸಿದರು. ಸೇವಾಧಾಮ ಸಂಸ್ಥೆಯ ಸಂಚಾಲಕರಾದ ಕೆ. ಪುರಂದರ ರಾವ್ ಹಾಗೂ ಸೇವಾಭಾರತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸ್ವರ್ಣಗೌರಿ ಅವರು ಸಂಸ್ಥೆಯ ಸಿಬ್ಬಂದಿಯೊಂದಿಗೆ ಈ ದೇಣಿಗೆಯನ್ನು ಸ್ವೀಕರಿಸಿ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.









