

ಕೊಕ್ಕಡ: ಕೊಕ್ಕಡ ಉಪ್ಪಾರಪಳಿಕೆಯ ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ (ರಿ.), ಶ್ರದ್ಧಾ ಗೆಳೆಯರ ಬಳಗ ಉಪ್ಪಾರಪಳಿಕೆ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಪ್ರಾರಂಭೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ನವೀಕರಿಸಿದ ಶ್ರೀ ಕೃಷ್ಣ ಭಜನಾ ಮಂದಿರದ ಪ್ರಾರಂಭೋತ್ಸವವನ್ನು ಏ.30ರಂದು ಸಂಜೆ 7ಗಂಟೆಗೆ ನೆರವೇರಲಿದೆ.

ಪ್ರಾರಂಭೋತ್ಸವ ದಿನ ಬೆಳಿಗ್ಗೆ 7:00ಕ್ಕೆ ಗಣಹೋಮ, ಬಳಿಕ ವೃಷಭ ಲಗ್ನದಲ್ಲಿ ನವೀಕೃತ ಭಜನಾ ಮಂದಿರದ ಪ್ರಾರಂಭೋತ್ಸವ ನಡೆಯಲಿದೆ. ನಂತರ ಸಾಮೂಹಿಕ ಹನುಮಾನ್ ಚಾಲಿಸ್ ಪಠಣ, ಬೆಳಗ್ಗೆ 10:30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಪೂಜೆ ನೆರವೇರಿಸಿ ನಂತರ ಭಕ್ತರಿಗಾಗಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.

ಸಂಜೆ 4 ಗಂಟೆಯಿಂದ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಶ್ರೀನಾಥ್ ಬಡೆಕಾೈಲು ಸಭಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸಕರಾಗಿ ಮಂಗಳೂರು ಕುದ್ರೋಳಿ ಶ್ರೀ ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಬೆಳ್ತಂಗಡಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ.ಡಿ ಪುಷ್ಪಗಿರಿ ಉರುವಾಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರ, ಕೊಕ್ಕಡ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ರಾತ್ರಿ 9:00ರಿಂದ ಚಿದಾನಂದ ಅದ್ಯಪಾಡಿ ನಿರ್ದೇಶನದ ಭಕ್ತಿಪ್ರಧಾನ ತುಳು ನಾಟಕ “ದೈವರಾಜೆ ಶ್ರೀ ಬಬ್ಬು ಸ್ವಾಮಿ” ಅನ್ನು ಕೈಕಂಬದ ವಿಧಾತ್ರೀ ಕಲಾವಿದೆರ್ ಕುಡ್ಲ ವಿಜಯ್ ಕುಮಾರ್ ಕೋಡಿಯಲ್ ಬೈಲ್ ಅವರ ಸಲಹೆ ಮತ್ತು ಸಹಕಾರದೊಂದಿಗೆ ಪ್ರದರ್ಶನಗೊಳ್ಳಲಿದೆ.

ಎಂದು ಶ್ರೀ ಕೃಷ್ಣ ಭಜನಾ ಮಂದಿರ ಪ್ರಾರಂಭೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬಳಕ್ಕ, ಉಪ್ಪಾರಪಳಿಕೆ ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ (ರಿ) ಗೌರವಾಧ್ಯಕ್ಷ ಯೋಗೀಶ್ ಆಲಂಬಿಲ, ಶ್ರದ್ಧಾ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ್ ದೇರಾಜೆ, ಪ್ರಾರಂಭೋತ್ಸವ ಸಮಿತಿಯ ಕಾರ್ಯದರ್ಶಿ ಶಿವಾನಂದ ಸಂಕೇಶ ಹಾಗೂ ಸೇವಾ ಟ್ರಸ್ಟ್ ಕಾರ್ಯದರ್ಶಿ ಶ್ರೀಧರ್ ಬಳಕ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











