

ನೆಲ್ಯಾಡಿ: ನೆಲ್ಯಾಡಿ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಮುತುವರ್ಜಿಯ ಶಿಕ್ಷಕಿ ಜಯಂತಿ ಎಸ್.ರವರು ಏ.30ರಂದು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಲಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಸಾಮೆಹೊಲದಲ್ಲಿ ಜನಿಸಿದ ಜಯಂತಿ ಎಸ್. ಅವರು ಪಿಯುಸಿ ಶಿಕ್ಷಣ ಪೂರೈಸಿ 1986ರಲ್ಲಿ ಪುತ್ತೂರು ತಾಲೂಕಿನ ಗೋಳಿದಡಿ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. 1988ರಲ್ಲಿ ನೆಲ್ಯಾಡಿ ಶಾಲೆಗೆ ವರ್ಗಾವಣೆಗೊಂಡ ಅವರು ಇದೇ ಅವಧಿಯಲ್ಲಿ ಟಿಸಿಎಚ್ ತರಬೇತಿ ಪಡೆದು 2000ರಲ್ಲಿ ಪುಚ್ಚೇರಿ ಶಾಲೆಗೆ ವರ್ಗಾಯಿಸಲ್ಪಟ್ಟರು. ಹತ್ತು ವರ್ಷ ಸೇವೆ ಸಲ್ಲಿಸಿದ ಬಳಿಕ ಮತ್ತೆ ನೆಲ್ಯಾಡಿ ಶಾಲೆಗೆ ವರ್ಗಾವಣೆಗೊಂಡ ಜಯಂತಿ ಅವರು ಒಟ್ಟು 39ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದರು.
ಅವರು ನೆಲ್ಯಾಡಿ ಜೇಸಿರೇಟ್ನ ಮಾಜಿ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಬರೆಗುಡ್ಡೆ ‘ವಾತ್ಸಲ್ಯ’ ನಿವಾಸದಲ್ಲಿ ಪತಿ ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ, ಪುತ್ರ ಬ್ಯಾಂಕ್ ಉದ್ಯೋಗಿ ವಂದನ್ ಕುಮಾರ್, ಸೊಸೆ ಜ್ಯೋತಿ ಹಾಗೂ ಮೊಮ್ಮಗ ರುಧಾನ್ಸ್ ವಿ. ನಾಯ್ಕ್ರವರೊಂದಿಗೆ ವಾಸವಿದ್ದಾರೆ.













