

ಬೆಳ್ತಂಗಡಿಯ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿನೂತನ ಶೋರೂಮ್ ಉದ್ಘಾಟನೆ ಸಮಾರಂಭದ ಹಿನ್ನೆಲೆಯಲ್ಲಿ ಕರಾವಳಿಯ ಮನೆ ಮಾತಾಗಿರುವ ಹಾಸ್ಯ ನಟ ಅರವಿಂದ ಬೋಳಾರ್ ಇವರನ್ನು ಸನ್ಮಾನಿಸಲಾಯಿತು. ಜನರನ್ನು ನಗಿಸುವುದೇ ನನ್ನ ಕೆಲಸ ಜನ ಇಲ್ಲದಿದ್ದರೆ ನಾನಿಲ್ಲ ನಗು ಇಲ್ಲದಿದ್ದರೆ ಜನರೇ ಇದ್ದಂಗೆ ಇರುವುದಿಲ್ಲ ಎಂದು ಅವರು ಮಾರ್ಮಿಕವಾಗಿ ತಿಳಿಸಿದರು.
ಬೋಳಾರ್ ಅವರನ್ನು ನೋಡುವಾಗಲೇ ನಗು ಬರುತ್ತದೆ ಮತ್ತು ಡೈಲಾಗ್ ಪಂಚ್ ನಮಗೆ ಮತ್ತಷ್ಟು ಸಂತೋಷ ಕೊಡುತ್ತದೆ. ಎಂದು ಮುಳಿಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಸನ್ಮಾನಿಸಿ ಮಾತನಾಡುತ್ತಾ ಬೋಳಾರ್ ನಟನೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಮತ್ತು ಶಾಖಾಪ್ರಬಂಧಕ ಲೋಹಿತ್, ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ಮತ್ತಿತರು ಉಪಸ್ಥಿತರಿದ್ದರು.

ಹೆದ್ದಾರಿ ಬದಿಯ ಮನೆಯ ಗೇಟು ಬಳಿ ಕಾಡಾನೆಗಳು ನಿಂತು ರಸ್ತೆಯನ್ನು ದಾಟಲು ಯತ್ನಿಸುತ್ತಿದ್ದು, ಈ ವೇಳೆ ವಾಹನಗಳು ಸಂಚರಿಸುತ್ತಿರುವ ದೃಶ್ಯಗಳು ದೃಢವಾದ ಸಾಕ್ಷ್ಯವಾಗಿವೆ. ಈ ಪ್ರದೇಶದಲ್ಲಿ ಈ ಮೊದಲು ಕೂಡ ಕಾಡಾನೆಗಳ ಅಟ್ಟಹಾಸ ಕಂಡು ಬಂದಿದ್ದು, ಕೃಷಿ ತೋಟಗಳಿಗೆ ಹಾನಿಯೂ ಉಂಟಾಗಿದೆ.
ಸ್ಥಳೀಯ ಕೃಷ್ಣ ಮುರಾರಿ ಅವರು, “ಇಷ್ಟು ದಿನಕ್ಕೂ ಯಾವುದೇ ನಿರ್ದಿಷ್ಟ ಕಾರ್ಯಾಚರಣೆ ಫಲ ನೀಡಿಲ್ಲ. ಕಾಡಾನೆಗಳು ಆಗ ಬಂದು ಹಾನಿ ಮಾಡುತ್ತವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆರ್ನಾಜೆಯ ಕುಮಾರ್ ಅವರೂ, “ಇಲ್ಲಿಯ ಜೀವನದ ಅವಿಭಾಜ್ಯ ಭಾಗವೇ ಈಗ ಕಾಡಾನೆ ಭಯ. ನಿತ್ಯವೂ ಎಲ್ಲಿ ಕಾಡಾನೆ ಬರುತ್ತದೆ ಎಂಬ ಆತಂಕದಲ್ಲಿ ಬದುಕುತ್ತಿದ್ದೇವೆ” ಎಂದು ದುಃಖಿಸಿದರು.
ಈ ಹಿಂದೆ ಎಪ್ರಿಲ್ 29ರಂದು ಅರ್ತ್ಯಡ್ಕದಲ್ಲಿ ಕಾಡಾನೆಯೊಂದು ಮಹಿಳೆಯನ್ನು ಕೊಂದು ಹಾಕಿದ್ದ ಹಿನ್ನಲೆಯಲ್ಲಿ, ಚಿಕ್ಕಮಗಳೂರಿನಿಂದ ಇಟಿಎಫ್ (ಎಲಿಫೆಂಟ್ ಟ್ಯಾಸ್ಕ್ ಫೋರ್ಸ್) ತಂಡವನ್ನು ಕರೆಸಿ ಕಾರ್ಯಾಚರಣೆ ನಡೆಸಲಾಗಿತ್ತು. ಮೇ 5 ರಿಂದ ಕಾರ್ಯಾರಂಭಿಸಿ, ಇತ್ತೀಚೆಗೆ ಅದು ಅಂತ್ಯಗೊಂಡಿತ್ತು. ಆದರೆ ಅದರ ಬೆನ್ನಲ್ಲೇ ಮತ್ತೆ ಕಾಡಾನೆಗಳು ಆನೆಗುಂಡಿ ಪರಿಸರದಲ್ಲಿ ಕಾಣಿಸಿಕೊಂಡಿರುವುದು ಹಲವರಿಗೆ ಅಚ್ಚರಿ ತಂದಿದೆ.
ಇಟಿಎಫ್ ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯು ಈಗ ಕಾಡಾನೆಗಳನ್ನು ಕನಕಮಜಲು ಅರಣ್ಯ ಭಾಗ ಅಥವಾ ಕೇರಳದ ಅರಣ್ಯ ಪ್ರದೇಶಕ್ಕೆ ತಿರುಗಿಸೋಲುವ ಪ್ರಯತ್ನದಲ್ಲಿದೆ. ಆದರೆ ಇಂತಹ ಕಾರ್ಯಾಚರಣೆಗಳು ಯಶಸ್ವಿಯಾಗದೇ ಇದ್ದರೆ, ಹತ್ತಿರದ ಗ್ರಾಮಗಳಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಲಿದೆ ಎಂಬುದರ ಬಗ್ಗೆ ಸ್ಥಳೀಯರು ಗಂಭೀರ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.












