ತೆಲಿಕೆದ ಬೊಳ್ಳಿ ಅರವಿಂದ್ ಬೋಳಾರ್ ರಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಕಡೆಯಿಂದ ಸನ್ಮಾನ

ಶೇರ್ ಮಾಡಿ

ಬೆಳ್ತಂಗಡಿಯ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿನೂತನ ಶೋರೂಮ್ ಉದ್ಘಾಟನೆ ಸಮಾರಂಭದ ಹಿನ್ನೆಲೆಯಲ್ಲಿ ಕರಾವಳಿಯ ಮನೆ ಮಾತಾಗಿರುವ ಹಾಸ್ಯ ನಟ ಅರವಿಂದ ಬೋಳಾರ್ ಇವರನ್ನು ಸನ್ಮಾನಿಸಲಾಯಿತು. ಜನರನ್ನು ನಗಿಸುವುದೇ ನನ್ನ ಕೆಲಸ ಜನ ಇಲ್ಲದಿದ್ದರೆ ನಾನಿಲ್ಲ ನಗು ಇಲ್ಲದಿದ್ದರೆ ಜನರೇ ಇದ್ದಂಗೆ ಇರುವುದಿಲ್ಲ ಎಂದು ಅವರು ಮಾರ್ಮಿಕವಾಗಿ ತಿಳಿಸಿದರು.

ಬೋಳಾರ್ ಅವರನ್ನು ನೋಡುವಾಗಲೇ ನಗು ಬರುತ್ತದೆ ಮತ್ತು ಡೈಲಾಗ್ ಪಂಚ್ ನಮಗೆ ಮತ್ತಷ್ಟು ಸಂತೋಷ ಕೊಡುತ್ತದೆ. ಎಂದು ಮುಳಿಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಸನ್ಮಾನಿಸಿ ಮಾತನಾಡುತ್ತಾ ಬೋಳಾರ್ ನಟನೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಮತ್ತು ಶಾಖಾಪ್ರಬಂಧಕ ಲೋಹಿತ್, ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ಮತ್ತಿತರು ಉಪಸ್ಥಿತರಿದ್ದರು.

  •  

Leave a Reply

error: Content is protected !!