

ಪುತ್ತೂರು: ಪುತ್ತೂರಿನಿಂದ ಕಾಣಿಯೂರಿನ ಕಡೆಗೆ ಚಲಿಸುತ್ತಿದ್ದ ಮಾರುತಿ ಎರ್ಟಿಗಾ ಕಾರೊಂದು ಕಾಣಿಯೂರು–ಸುಬ್ರಹ್ಮಣ್ಯ ಮುಖ್ಯರಸ್ತೆಯ ಗಡಿಪಿಲದ ಕರೆಮನೆ ಕಟ್ಟೆ ಬಳಿ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆಯ ಬದಿಯ ತೋಟಕ್ಕೆ ಉರುಳಿ ಬಿದ್ದಿದ್ದು, ಕ್ಷಣಮಾತ್ರದಲ್ಲಿ ಕಾರು ಪಲ್ಟಿಯಾಗಿದೆ.
ಪುತ್ತೂರಿನಿಂದ ಕಾಣಿಯೂರಿನತ್ತ ಸಾಗುತ್ತಿದ್ದ ಕಾರು ಗಡಿಪಿಲದ ಬಳಿ ಬಂದಾಗ ಎದುರಿನಿಂದ ಬರುವ ವಾಹನಕ್ಕೆ ದಾರಿ ನೀಡುವ ನಿಟ್ಟಿನಲ್ಲಿ ಚಾಲಕನು ಕಾರನ್ನು ರಸ್ತೆಯ ಅಂಚಿಗೆ ತೆಗೆದುಕೊಂಡಿದ್ದನು. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯ ಬದಿಯ ಮಣ್ಣು ಕುಸಿದ ಸ್ಥಿತಿಯಲ್ಲಿದ್ದು, ಕಾರಿನ ಚಕ್ರಗಳು ಹಿಡಿತ ತಪ್ಪಿ ಸ್ಕಿಡ್ ಆದವು. ಪರಿಣಾಮವಾಗಿ, ಕಾರು ನೇರವಾಗಿ ರಸ್ತೆ ಬದಿ ತೋಟಕ್ಕೆ ಉರುಳಿ ಬಿದ್ದು ಪಲ್ಟಿಯಾಗಿದೆ.
ಅಪಘಾತದ ರಭಸಕ್ಕೆ ಕಾರು ಪಲ್ಟಿಯಾಗಿದ್ದರೂ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.













