
ನೇಸರ ಮಾ.09: ಜೇಸಿಐ ವಿಟ್ಲ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.07ರಂದು ರಕ್ತ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು.
💢ತಪ್ಪದೆ ವೀಕ್ಷಿಸಿ Subscribers ಮಾಡಿ💢

ಜೇಸಿಐ ವಿಟ್ಲ ಘಟಕದ ಅಧ್ಯಕ್ಷರಾದ ಜೇಸಿ.ಚಂದ್ರಹಾಸ ಕೊಪ್ಪಳ ಸಭೆಯನ್ನು ಸುಸ್ಥಿತಿಗೆ ತಂದರು.ಲೇಡಿ ಜೇಸಿ.ಸೌಮ್ಯ ಚಂದ್ರಹಾಸ ಕಾರ್ಯಕ್ರಮದ ಕಾರ್ಯಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿ ಮಮತಾಸಂಜೀವ ಪೂಜಾರಿರವರು ರಕ್ತ ತಪಾಸಣೆಯ ಮಹತ್ವ ತಿಳಿಸಿದರು. ರಕ್ತತಪಾಸಣಾ ಕೇಂದ್ರದ ಮುಖ್ಯಸ್ಥರಾದ ಚೇತನ್ ಕಜೆ ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದಲ್ಲಿ ಜೇಸಿ ಪೂರ್ವಧ್ಯಕ್ಷರುಗಳು ಹಾಗೂ ಸದಸ್ಯರು ಭಾಗವಹಿಸಿದರು.ಸುಮಾರು 75 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡರು.
—ಜಾಹೀರಾತು—



