ನೇಸರ ಮಾ.09: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇದರ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದಿಂದ “ಮಾರ್ಕೆಟಿಂಗ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್” ವಿಷಯದ ಕುರಿತಾದ ಒಂದು ದಿನದ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ಅಂತಾರಾಷ್ಟಿಯ ಹಾಳೆ ತಟ್ಟೆ ರಫ್ತು ಉದ್ಯಮ ವಿಟ್ಲ ಕೊಡಪದವು ಸಮೀಪದ ರಾಜರಾಮ್ ಒಡೆತನದ ಇಕೋ ಬ್ಳಿಸ್ ಉದ್ಯಮಕ್ಕೆ ಭೇಟಿ ನೀಡಿ ಹಾಳೆ ತಟ್ಟೆ ಉದ್ಯಮ, ಮಾರುಕಟ್ಟೆ ಸಂವರ್ಧನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳೆ ತಟ್ಟೆ ಬೇಡಿಕೆ, ಪೂರೈಕೆ ಮತ್ತು ಬೆಲೆಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಸ್ವ ಉದ್ಯೋಗಿಗಳಿಗೆ ತಾವೇ ನಿರ್ಮಿಸಿ ವಿನ್ಯಾಸಗೊಳಿಸಿದ ಯಂತ್ರೋಪಕರಣ ಮಾಹಿತಿ ಹಾಗೂ ಸಂಸ್ಥೆಯಲ್ಲಿನ ಉದ್ಯೋಗಿಗಳಿಗೆ ಕೊಡಮಾಡುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿ. ರಫ್ತುವಿನ ವಿವಿಧ ಹಂತಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು. ಕಲ್ಲಡ್ಕ ಸಮೀಪದ ಧೀರಜ್ ಹಾಗೂ ಅಜಿತ್ ಒಡೆತನದ ಫಾರ್ಚುನ್ ಪೆಟ್ ಜಾರ್ ಇಂಡಸ್ಟ್ರಿಗೆ ತೆರಳಿ ವಿವಿಧ ವಿನ್ಯಾಸದ ಶೀಷೆ ತಯಾರಿಕಾ ಮಾಹಿತಿಯನ್ನು ಪಡೆಯಲಾಯಿತು. ನಾರಾಯಣ ಸೋಮಯಾಜಿ ಎರಕಲ ಒಡೆತನದ ಐತಿಹಾಸಿಕ ಬೃಹತ್ ಹಂಚು, ಇಟ್ಟಿಗೆ ಮತ್ತು ಟೈಲ್ಸ್ ತಯಾರಿಕ ಘಟಕ ಶ್ರೀಕೃಷ್ಣ ಬ್ರಿಕ್ಸ್ ಅಂಡ್ ಟೈಲ್ಸ್ ಪ್ರೈವೆಟ್.ಲಿ. ಇಲ್ಲಿಗೆ ಭೇಟಿ ನೀಡಿ ಸಂಸ್ಥೆಯ ಇತಿಹಾಸ, ಪ್ರೋಸೆಸ್ಸಿಂಗ್, ಕಾರ್ಖಾನೆಯಲ್ಲಿ ತಯಾರಾಗುವ ವಸ್ತುಗಳು ಅದರ ಮಾರುಕಟ್ಟೆ ವಿಚಾರದ ಬಗ್ಗೆ ಮಾಹಿತಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದು ಕೊಂಡರು.
ಪ್ರಥಮ ಬಿ.ಕಾಮ್ ಹಾಗೂ ಬಿ.ಬಿ.ಎ ಯ ಒಟ್ಟು 123 ವಿದ್ಯಾರ್ಥಿ ಅಧ್ಯಯನ ಪ್ರವಾಸದಲ್ಲಿ ಪಾಲ್ಗೊಂಡಿದ್ದು, ಸಂಸ್ಥೆಯ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಉಪನ್ಯಾಸಕರಾದ ರಮಾನಾಥ್.ಎ, ಶಿವಪ್ರಸಾದ್.ಎಸ್ ಮತ್ತು ಶ್ರೀಮತಿ ಕೃತಿಕಾ ಪಿ.ಎಸ್ ಮಾರ್ಗದರ್ಶನ ನೀಡಿದರು.
—ಜಾಹೀರಾತು—