ಗಣೇಶ್ ಪುರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ಸಾಧಕಿಯರಿಗೆ ಸನ್ಮಾನ

ಶೇರ್ ಮಾಡಿ

ನೇಸರ ಮಾ.09: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜೇಸಿಐ ಗಣೇಶ್ ಪುರ, ಶಿವಜ್ಯೋತಿ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ಶ್ರೀ ಬೆಂಕಿನಾತೇಶ್ವರ ಮಂದಿರದ ಪ್ರಾಂಗಣದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಐದು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಂತಹ ಮಹಿಳಾ ಸಾಧಕಿಯರನ್ನು ಮೂರು ವಿಭಾಗಗಳಲ್ಲಿ ಸನ್ಮಾನಿಸಲಾಯಿತು.
“ಸಂಜೀವಿನಿ” ವಿಭಾಗದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೋವಿಡ್ ಸಮಯದಲ್ಲಿ ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಶ್ರೀಮತಿ ನಳಿನಾಕ್ಷಿ ಮತ್ತು ಶ್ರೀಮತಿ ಇಂದಿರಾ ಅವರನ್ನು, “ನಮನ” ವಿಭಾಗದಲ್ಲಿ
ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮತಿ ಜೇಸಿ. ಉಷಾ ಮಂದಾರ ಅವರನ್ನು ಮತ್ತು ಸಮಾಜ ಸೇವೆಗಾಗಿ ಶ್ರೀಮತಿ ದೇವಕಿ ಅವರನ್ನು, “ನನ್ನ ಹೆಜ್ಜೆ” ವಿಭಾಗದಲ್ಲಿ ಯೋಗ ಶಿಕ್ಷಕಿಯಾದ ಶ್ರೀಮತಿ ಪದ್ಮಿನಿ ವಸಂತ್ ಕೃಷ್ಣಾಪುರ ಇವರನ್ನು ಹಾಗೂ ಕಳಾವರ್ ನಲ್ಲಿ ಸ್ವಂತ ಮಾಲಿಕತ್ವದಲ್ಲಿ ಹೊಲಿಗೆ ಅಂಗಡಿ ಮತ್ತು ಬ್ಯೂಟಿಪಾರ್ಲರ್ ಅನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಯುವ ಉದ್ಯಮಿ ಶ್ರೀಮತಿ ಶೋಭಾ ನವೀನ್ ಅವರನ್ನು ಸನ್ಮಾನಿಸಲಾಯಿತು.

🔆 ಮಾ.9 ರಂದು ರಾತ್ರಿ 8:30 ಕ್ಕೆ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನದ ನೇರ ಪ್ರಸಾರ🔆
💢ತಪ್ಪದೆ ವೀಕ್ಷಿಸಿ Subscribers ಮಾಡಿ💢

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀಮತಿ ಪದ್ಮಿನಿ ವಸಂತ್ ಅವರು ತಮ್ಮ ಪರಿಸರದಲ್ಲಿ ಉಚಿತವಾಗಿ ಯೋಗ ಶಿಕ್ಷಣವನ್ನು ನೀಡುತ್ತಿದ್ದು, ಯೋಗ ಜೀವನದಲ್ಲಿ ಎಷ್ಟು ಮುಖ್ಯ ಹಾಗೂ ಅದರಿಂದ ಆಗುವ ಉಪಯೋಗಗಳನ್ನು ಬಹಳ ಸರಳವಾದ ಸೂತ್ರಗಳೊಂದಿಗೆ ವಿವರಿಸಿ, ದಿನನಿತ್ಯ ಯೋಗ ಮತ್ತು ಪ್ರಾಣಾಯಾಮವನ್ನು ಅಭ್ಯಯಿಸುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಜೇಸಿಐ ಗಣೇಶ್ ಪುರದ ಅಧ್ಯಕ್ಷರಾದ ಜೇಸಿ ಚಂದನ್ ಆರ್ ಡಿಸೋಜ ಕಾರ್ಯಕ್ರಮ ಉದ್ದೇಶದೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಲೇಖನ ಜೇಸಿಐ ಗಣೇಶ್ ಪುರ ಮತ್ತು ಶಿವಜ್ಯೋತಿ ಮಹಿಳಾ ಮಂಡಳಿ ಇವರುಗಳ ಕಾರ್ಯವನ್ನು ಶ್ಲಾಘಿಸುತ್ತ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಜೇಸಿ.ಜ್ಯೋತ್ಸ್ನಾ ಕರ್ಮರನ್ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಜೇಸಿ.ವನಿತಾ ಅಂಚನ್, ಜೇಸಿ.ಶ್ರೀಶ ಕರ್ಮರನ್, ಜೇಸಿಐ.SEN.ಶರತ್ ಕುಮಾರ್, ಜೇಸಿ ಭಾರತಿ ಶ್ರೀಶ, ಜೇಸಿ.ಮಂದಾರ ವಿ ಕಾಳೆ ಉಪಸ್ಥಿತರಿದ್ದರು ಕಾರ್ಯದರ್ಶಿ ಜೇಸಿ.ವೇಣುಗೋಪಾಲ್ ವಂದಿಸಿದರು.

 

—ಜಾಹೀರಾತು—

Leave a Reply

error: Content is protected !!