ಅರಸಿನಮಕ್ಕಿ: ಶಿವಾನಿ ಸಂಜೀವಿನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟದ ಕಚೇರಿ ಉದ್ಘಾಟನೆ

ಶೇರ್ ಮಾಡಿ

ನೇಸರ ಮಾ.09: ಅರಸಿನಮಕ್ಕಿಯಲ್ಲಿ ಶಿವಾನಿ ಸಂಜೀವಿನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟ ಇದರ ಕಚೇರಿ ಉದ್ಘಾಟನೆ ಕಾರ್ಯಕ್ರಮವು ಮಾ.09ರಂದು ನಡೆಯಿತು. ಅರಸಿನಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನವೀನ್ ಕೆ.ಎನ್ ದೀಪ ಬೆಳಗಿಸುವ ಮೂಲಕ ಕಚೇರಿಯನ್ನು ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಮಹಿಳಾ ಸಬಲೀಕರಣದ ಬಗ್ಗೆ ತಿಳಿ ಹೇಳಿದರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಲಿಂಗನ ಗೌಡ ರವರು ಮಹಿಳಾ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು, ಬೆಳ್ತಂಗಡಿ ತಾಲೂಕು ಮೇಲ್ವಿಚಾರಕಿ ಶ್ರೀಮತಿ ಪ್ರತಿಮಾ ಸ್ವಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಶಿಬಾಜೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶೋಭಾ ಇವರು ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ಪಂಚಾಯತ್ ಕಾರ್ಯದರ್ಶಿ ವೆಂಕಪ್ಪ, ಪಂಚಾಯತ್ ಸದಸ್ಯರಾದ ಸುಧೀರ್ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

🔆 ಮಾ.9 ರಂದು ರಾತ್ರಿ 8:30 ಕ್ಕೆ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನದ ನೇರ ಪ್ರಸಾರ🔆
💢ತಪ್ಪದೆ ವೀಕ್ಷಿಸಿ Subscribers ಮಾಡಿ💢

ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿದರು. ಶ್ರೀಮತಿ ಕೌಸಲ್ಯ ಪ್ರಾರ್ಥಿಸಿದರು. ರೇವತಿ ಸ್ವಾಗತಿಸಿದರು. ವಿಮಲ್ ಶೆಟ್ಟಿ ಧನ್ಯವಾದ ನೀಡಿದರು. ಹೇಮಲತಾ ಕಾರ್ಯಕ್ರಮವನ್ನು ನಿರೂಪಿಸಿದರು.

—ಜಾಹೀರಾತು—

Leave a Reply

error: Content is protected !!