ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪನಾ ದಿನ, ಕಾಲೇಜು ಸಂಸತ್ತಿನ ಉದ್ಘಾಟನೆ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜೂ.30ರಂದು ವಿಜೃಂಭಣೆಯಿಂದ ಸಂಸ್ಥಾಪನಾ ದಿನಾಚರಣೆ, ಕಾಲೇಜು ಸಂಸತ್ತಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಮುಂಜಾನೆ 7.30ಕ್ಕೆ ಇ.ಎ.ಇ. ಸೈಂಟ್ ಸೈಮನ್ ಚರ್ಚ್, ಉರೆಜಾಲ್ ಇಚ್ಲಂಪಾಡಿಯ ಧರ್ಮಗುರು ಫಾ.ವಿಲ್ಸನ್ ಮತ್ತಾಯಿ ದಿವ್ಯಚೇತನ ಚಾಪೆಲ್‌ನಲ್ಲಿ ಕೃತಜ್ಞತಾ ಬಲಿಪೂಜೆಯನ್ನು ನೆರವೇರಿಸಿದರು. ನಂತರ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕೀರ್ತಿಶೇಷ ಬಿಷಪ್ಪರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಂಡಾಜೆ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜೋಲಿ ಒ.ಎ ಅವರು ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ನೆರವೇರಿಸಿ ಮಾತನಾಡಿದರು: “ವಿದ್ಯಾರ್ಥಿಗಳು ಭವಿಷ್ಯದ ರೂವಾರಿಗಳು. ಉತ್ತಮ ನಾಯಕತ್ವ ಹಾಗೂ ಚಿಂತನೆಗಳ ಅಭಿವೃದ್ಧಿಗೆ ವಿದ್ಯಾರ್ಥಿ ಸಂಸತ್ತು ನೆರವಾಗಲಿದೆ” ಎಂದರು.

ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ರವರು ಮಾತನಾಡುತ್ತಾ: “ವಿದ್ಯಾರ್ಥಿಗಳು ಸವಾಲುಗಳನ್ನು ಸಶಕ್ತವಾಗಿ ಎದುರಿಸಿ ಸಫಲತೆ ಸಾಧಿಸಿದಾಗ ಸುಂದರ ಭವಿಷ್ಯ ರೂಪುಗೊಳ್ಳುತ್ತದೆ” ಎಂದು ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕರಾದ ಫಾ. ನೋಮಿಸ್ ಕುರಿಯಾಕೋಸ್ ಅವರು ಅಧ್ಯಕ್ಷತೆ ವಹಿಸಿ, ಪರಿಶ್ರಮದಿಂದ ಮಾತ್ರ ಪ್ರಗತಿಯ ದಾರಿ ಸಾಧ್ಯವಿದೆ ಎಂಬ ಸಂದೇಶ ನೀಡಿದರು.

ವಿದ್ಯಾರ್ಥಿ ಸಂಸತ್ತಿನ ನಾಯಕರಿಗೆ ಪದ ಪ್ರದಾನ ಮಾಡಿದ ಬಳಿಕ ಪ್ರಾಂಶುಪಾಲರಾದ ಎಲಿಯಾಸ್ ಎಂ.ಕೆ ಪ್ರಮಾಣವಚನ ಬೋಧಿಸಿದರು. ಅಧ್ಯಕ್ಷೆ ಆಯಿಶತ್ ಫಾಹಿಮಾ ಶಾಲಾ ವರದಿ ವಾಚಿಸಿದರು.

2025-26ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ಮರಣಿಕೆ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳ ಹೆಸರನ್ನು ಶಿಕ್ಷಕಿಯರಾದ ಅನುಷಾ ಎಂ.ಕೆ ಮತ್ತು ಉಪನ್ಯಾಸಕ ಪ್ರಜ್ವಲ್ ಕುಮಾರ್ ಕೆ.ಪಿ ಪ್ರಕಟಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂ.ಎ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಪೂರ್ವ ವಿದ್ಯಾರ್ಥಿನಿ ಜಿಲ್ ಶಾ ಮೇರಿ ಪಿ.ಜೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪೂರ್ವ ವಿದ್ಯಾರ್ಥಿ ಪ್ರಿನ್ಸ್ ಚಾಕೋ ಹಾಗೂ ನಿವೃತ್ತ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಗುರು ಎಂ.ಐ.ತೋಮಸ್ ಸ್ವಾಗತಿಸಿದರು, ಆಂಗ್ಲ ವಿಭಾಗದ ಮುಖ್ಯಸ್ಥ ಹರಿಪ್ರಸಾದ್ ಕೆ ವಂದಿಸಿದರು. ಉಪನ್ಯಾಸಕ ಚೇತನ್ ಕುಮಾರ್ ಟಿ ಕಾರ್ಯಕ್ರಮ ನಿರೂಪಿಸಿದರು. ಗೀತಾ ಪಿ.ಬಿ, ಭವ್ಯಾ ಮತ್ತು ರಾಬಿಯಾ ಕಾರ್ಯಕ್ರಮ ಸಂಯೋಜಿಸಿದರು.

  •  

Leave a Reply

error: Content is protected !!