ನೆಲ್ಯಾಡಿ: ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಲೀಜನ್‌ನ ಪದಪ್ರಧಾನ ಸಮಾರಂಭ

ಶೇರ್ ಮಾಡಿ

ನೆಲ್ಯಾಡಿ: ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಲೀಜನ್‌ನ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಹಾಗೂ ಪದಪ್ರಧಾನ ಸಮಾರಂಭವು ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನ ಅಧ್ಯಕ್ಷ ಜಯೇಶ್ ಅವರು ಸಮಾರಂಭವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಥಮಾರ್ಧದ ಅಧ್ಯಕ್ಷತೆಯನ್ನು ಲೀಜನ್ ಅಧ್ಯಕ್ಷ ಶೀನಪ್ಪ ಎಸ್ ವಹಿಸಿದ್ದರು.

ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷರಾದ ಸಿದ್ದಗಂಗಯ್ಯ, ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಫಾ.ಡಾ. ವರ್ಗೀಸ್ ಕೈಪನಡ್ಕ, ಸಂಚಾಲಕರಾದ ಫಾ.ಜೇಸನ್ ಸೈಮನ್, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನ ಸ್ಥಾಪಕಾಧ್ಯಕ್ಷ ಡಾ. ಕೇದಗೆ ಅರವಿಂದ ರಾವ್, ನೆಲ್ಯಾಡಿ ಘಟಕದ ಸ್ಥಾಪಕ ಅಧ್ಯಕ್ಷ ಅಬ್ರಹಾಂ ವರ್ಗೀಸ್, ಕೋಆರ್ಡಿನೇಟರ್ ಡಾ. ಸದಾನಂದ ಕುಂದರ್, ನಿಕಟಪೂರ್ವ ಅಧ್ಯಕ್ಷ ನಾರಾಯಣ ಎನ್ ಬಲ್ಯ, ನೆಲ್ಯಾಡಿ ಜೇಸಿಐ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಬೆಥನಿ ಐಟಿಐ ಪ್ರಾಂಶುಪಾಲ ಸಜಿ ಕೆ ತೋಮಸ್, ಕೌಕ್ರಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಉದಯಕುಮಾರ್, ಕಾರ್ಯದರ್ಶಿ ಮೋಹನ್ ಕುಮಾರ್ ಡಿ, ಕೋಶಾಧಿಕಾರಿ ಪ್ರಕಾಶ್ ಕೆ ವೈ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಪ್ರಕಾಶ್ ಕೆ ವೈ, ಕಾರ್ಯದರ್ಶಿಯಾಗಿ ಉಲಹಾನ್ನನ್ ಪಿ.ಎಮ್ ಮತ್ತು ಕೋಶಾಧಿಕಾರಿಯಾಗಿ ಮೋಹನ್ ಕುಮಾರ್ ಡಿ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಸಭಾಧ್ಯಕ್ಷರಾಗಿ ಪ್ರಕಾಶ್ ಕೆ ವೈ ಅವರು ಮಾತನಾಡಿ, ಸಂಸ್ಥೆಯ ಬೆಳವಣಿಗೆಗೆ ಎಲ್ಲರ ಸಹಕಾರ ಕೋರಿದರು.

ಸನ್ಮಾನ:
ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಜಯೇಶ್, ಉಪಾಧ್ಯಕ್ಷ ಸಿದ್ದಗಂಗಯ್ಯ ಮತ್ತು ನೆಲ್ಯಾಡಿ ಲೀಜನ್‌ನ ಶೀನಪ್ಪ ಎಸ್ ಅವರನ್ನು ಸನ್ಮಾನಿಸಲಾಯಿತು.

ರವೀಂದ್ರ ಟಿ ಅತಿಥಿಗಳನ್ನು ವೇದಿಕೆಗೆ ಅವಮಾನಿಸಿದರು. ನೂತನ ಕಾರ್ಯದರ್ಶಿ ಉಲಹಾನ್ನನ್ ವಂದಿಸಿದರು.

  •  

Leave a Reply

error: Content is protected !!