ನೆಲ್ಯಾಡಿ: ಕ್ಯಾಂಪ್ಕೋ ಸಂಸ್ಥೆಯಿಂದ ‘ಸಾಂತ್ವನ’ ಯೋಜನೆಯಡಿಯಲ್ಲಿ ನೆರವಿನ ಚೆಕ್ ಹಸ್ತಾಂತರ

ಶೇರ್ ಮಾಡಿ

ನೆಲ್ಯಾಡಿ:ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಎಂಬ ಮಾನವೀಯ ಯೋಜನೆಯಡಿಯಲ್ಲಿ, ಆರ್ಥಿಕ ಸಂಕಷ್ಟದಲ್ಲಿರುವ ಸದಸ್ಯರಿಗೆ ಸಹಾಯಧನ ನೀಡುವ ಕಾರ್ಯಕ್ರಮದಡಿ, ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನೆಲ್ಯಾಡಿ ಶಾಖೆಯ ಸಕ್ರಿಯ ಸದಸ್ಯ ಮಹೇಶ.ಕೆ ಅವರಿಗೆ ರೂ.3,00,000 ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.

ಕ್ಯಾಂಪ್ಕೋ ಸಂಸ್ಥೆಯ ನೆಲ್ಯಾಡಿ ಶಾಖೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಚೆಕ್ ಹಸ್ತಾಂತರಿಸಿದರು. ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್ ಶೆಟ್ಟಿ, ನೆಲ್ಯಾಡಿ ಶಾಖೆಯ ಪ್ರಬಂಧಕರಾದ ಪ್ರಥಮ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  •  

Leave a Reply

error: Content is protected !!