

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಅವೈಜ್ಞಾನಿಕ ಕಾಮಗಾರಿ ಇದೀಗ ಗ್ರಾಮಸ್ಥರ ನಿದ್ರೆಯನ್ನು ಕದಡಿದಂತಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಈ ರಸ್ತೆ ಬದುಕು ಮರಣದ ದಾರಿಗೆ ತಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ನಿರ್ಮಾಣವಾಗಿದೆ. ಇಂತಹ ಕೆಲಸಗಳ ವಿರುದ್ಧ ಗ್ರಾಮಸ್ಥರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದು.
ರೆಖ್ಯಾ ಗ್ರಾಮಕ್ಕೆ ಸೇರಿರುವ ಎಂಜಿರ, ನೇಲ್ಯಡ್ಕ, ಪರ್ಕಳ ಭಾಗಗಳಲ್ಲಿ ಹೆದ್ದಾರಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಭಾಗದಲ್ಲಿ ಸರ್ವಿಸ್ ರಸ್ತೆ ನಿರ್ಮಾಣವೇ ಆಗಿಲ್ಲ. ಮುಖ್ಯ ರಸ್ತೆಗೆ ಕೋಳಾರು ಸಂಪರ್ಕ ರಸ್ತೆ ನೇಲ್ಯಡ್ಕದಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಮಾಡಿಲ್ಲ, ಮಕ್ಕಳು, ಸಾರ್ವಜನಿಕರು ರಸ್ತೆ ದಾಟಲು ತಡೆಗೋಡೆ ಕಾಟ. ಅನಗತ್ಯ ಸ್ಥಳದಲ್ಲಿ ಬಸ್ಸು ನಿಲ್ದಾಣ ನಿರ್ಮಿಸಿ, ಅಗತ್ಯವಿದ್ದ ಕಡೆ ದಾರಿ ದೀಪ ಅಳವಡಿಸಿಲ್ಲ. ಕೆಲವು ಸ್ಥಳಗಳಲ್ಲಿ ಗುಡ್ಡವಿದ್ದರೂ ತಡೆಗೋಡೆ ಹಾಕದೆ ಅಪಾಯಕ್ಕೆ ಆಹ್ವಾನ ನೀಡಲಾಗಿದೆ.
ಗ್ರಾಮಸ್ಥರು ಸಂಸದರಿಗೆ, ಶಾಸಕರಿಗೆ, ಹೆದ್ದಾರಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದಾರೆ ಯಾವುದೇ ಸ್ಪಂದನೆ ಇಲ್ಲ ಜುಲೈ 25 ಒಳಗೆ ಜನಪ್ರತಿನಿದಿನಗಳು ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದಿದ್ದರೆ, ರೆಖ್ಯಾ ಗ್ರಾಮದ ಜನತೆ, ಜುಲೈ 31ರಂದು ಎಂಜಿರ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ಕುಳಿತು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು.
ಗ್ರಾಮಸ್ಥರ ಆಕ್ರೋಶದ ತೀವ್ರತೆ ತಿಳಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜುಲೈ 25ರಂದು ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಆಜ್ಮಿ, ಇಂಜಿನಿಯರ್‌ಗಳೊಂದಿಗೆ ಕಾಮಗಾರಿಯನ್ನು ಪರಿಶೀಲಿಸಿದರು. ಗ್ರಾಮ ಪಂಚಾಯಿತಿ ಪದಾಧಿಕಾರಿಗಳ ಹಾಗೂ ಗ್ರಾಮಸ್ಥರ ಅಳಲು ಆಲಿಸಿದ ಶಾಸಕರು, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಯನ್ನು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.










