ನೇಸರ ಮಾ.11: ಜೇಸಿಐ ಪಂಜ ಪಂಚಶ್ರೀ ವತಿಯಿಂದ ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯದಲ್ಲಿ ಕ್ಷಯ ಮುಕ್ತ ಭಾರತ 2025 ಕಾರ್ಯಕ್ರಮ ದಿನಾಂಕ 11.03.2022 ರಂದು ಜೇಸಿಐ ಪಂಜ ಪಂಚಶ್ರೀ ಆಶ್ರಯದಲ್ಲಿ ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ ದಕ್ಷಿಣಕನ್ನಡ, ಕ್ಷಯ ಚಿಕಿತ್ಸಾ ಘಟಕ ಸುಳ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ, ಸಮಾಜಶಾಸ್ತ್ರ ವಿಭಾಗ ಕೆಎಸ್ಎಸ್ ಕಾಲೇಜು ಸುಬ್ರಮಣ್ಯ ಇದರ ಸಹಯೋಗದೊಂದಿಗೆ “ಟಿ.ಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ” ಅಭಿಯಾನ ಅಂಗವಾಗಿ ಕ್ಷಯ ಮುಕ್ತ ಭಾರತ 2025 ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ ಇದರ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೆಎಸ್ಎಸ್ ಕಾಲೇಜಿನ ಪ್ರಾಂಶುಪಾಲರು ಆಗಿರುವ ಡಾ.ಗೋವಿಂದ.ಎನ್ ಎಸ್ ಭಾಗವಹಿಸಿದ್ದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಘಟಕದ ಅಧ್ಯಕ್ಷರಾದ ಜೇಸಿ.ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ವೇದಿಕೆಯಲ್ಲಿ ಕ್ಷಯ ಚಿಕಿತ್ಸಾ ಘಟಕ ಸುಳ್ಯ ಇದರ ಹಿರಿಯ ಚಿಕಿತ್ಸಾ ಮೇಲ್ವಿಚಾರಕರು ಆಗಿರುವ ಲೋಕೇಶ್ ತಂಟೆಪ್ಪಾಡಿ, ಕಾರ್ಯಕ್ರಮ ನಿರ್ದೇಶಕ ಜೇಸಿ.ಶ್ರೀಕಾಂತ್ ಅಂಬೆಕಲ್ಲು ಉಪಸ್ಥಿತರಿದ್ದರು. ಜೇಸಿ.ಗಗನ್ ಕಿನ್ನಿಕುಮೇರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೇಸಿ.ಜೀವನ್ ಶೆಟ್ಟಿ ಗದ್ದೆ ಜೇಸಿವಾಣಿ ನುಡಿದರು. ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀ ಯ ಪೂರ್ವ ಅಧ್ಯಕ್ಷರು ಆಗಿರುವ ಜೇಸಿ.ಸೋಮಶೇಖರ ನೇರಳ, ರಾಜೇಶ್ ಕಂಬಳ ಹಾಗೂ ಸದಸ್ಯರುಗಳಾದ ಗೋಪಾಲ್ ಎಣ್ಣೆಮಜಲು, ಚಿದಾನಂದ ಕುಳ, ಪ್ರವೀಣ್ ಕಾಯರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯದ ಆರೋಗ್ಯ ಹಿರಿಯ ಸುರಕ್ಷಾಧಿಕಾರಿ ಶ್ರೀಮತಿ ಭಾಗ್ಯ, ಕಿರಿಯ ಸುರಕ್ಷಾಧಿಕಾರಿ ಶ್ರೀಮತಿ ಹೇಮಲತಾ ಮತ್ತು ಕೆಎಸ್ಎಸ್ ಕಾಲೇಜಿನ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜೇಸಿಐ ಪಂಜ ಪಂಚಶ್ರೀ ಯ ಜೊತೆ ಕಾರ್ಯದರ್ಶಿ ಆಗಿರುವ ವಿಜೇಶ್ ಹಿರಿಯಡ್ಕ ಧನ್ಯವಾದ ಸಮರ್ಪಿಸಿದರು.