ನೇಸರ ಮಾ.11: ಮಂಗಳೂರು ವಿವಿಯ ನೆಲ್ಯಾಡಿ ಘಟಕ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆಲ್ಯಾಡಿಯ ಘಟಕ ಕಾಲೇಜಿನಲ್ಲಿ ಮಾ.7ರಂದು ನಡೆಯಿತು.
ಶಿಕ್ಷಕ ರಕ್ಷಕ ಸಂಘದ ಕಾರ್ಯಾಧ್ಯಕ್ಷರಾಗಿ ಅಬ್ದುಲ್ ರಜಾಕ್ ಕೆಮ್ಮಾನ್.ಎ. ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಎಂ. ಆಯ್ಕೆಯಾದರು. ಸಹ ಕಾರ್ಯದರ್ಶಿಯಾಗಿ ನವೀನ ಆಚಾರಿ, ಸದಸ್ಯರಾಗಿ ಪರಮೇಶ್ವರಿ, ದಿವ್ಯಾ, ರಾಜೇಶ್ವರಿ ಆಯ್ಕೆಯಾದರು. ಶಿಕ್ಷಕರ ವತಿಯಿಂದ ಅಧ್ಯಕ್ಷರಾಗಿ ಸಂಯೋಜಕರಾದ ಡಾ.ಜಯರಾಜ್. ಎನ್, ಉಪಾಧ್ಯಕ್ಷರಾಗಿ ಡಾ.ಸೀತಾರಾಮ ಪಲ್ಲೋಡಿ, ಕಾರ್ಯದರ್ಶಿಯಾಗಿ ಚಂದ್ರಕಲಾ.ಬಿ, ಖಜಾಂಚಿಯಾಗಿ ವೆರೋನಿಕ ಪ್ರಭಾ ವಿ.ಪಿ. ಆಯ್ಕೆಯಾದರು. ಪದನಿಮಿತ್ತ ಸದಸ್ಯರಾಗಿ ಸುರೇಶ್ ಕೆ, ಶೃತಿ ಮಿತಿನ್, ವನಿತಾ ಪಿ., ಸದಸ್ಯರಾಗಿ ಡಾ.ನೂರಂದಪ್ಪ, ಸ್ಪೂರ್ತಿ ಕೆ.ಟಿ, ಡೀನಾ ಪಿ.ಪಿ, ನಿಶ್ಮಿತಾ.ಪಿ, ದಿವ್ಯಾ.ಕೆ, ದಿವ್ಯಶ್ರೀ.ಜಿ ಅವರು ಆಯ್ಕೆಯಾದರು. ಸಂಘದ ಅಧ್ಯಕ್ಷರಾಗಿರುವ ಸಂಯೋಜಕರಾದ ಡಾ.ಜಯರಾಜ್. ಎನ್ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ಖಾದರ್.ಎಂ ರವರು ಮಾತನಾಡಿ, ರಕ್ಷಕರ ಪ್ರತಿನಿಧಿಯಾಗಿ ಕಾಲೇಜಿನ ಸಂಯೋಜಕರ ಇಚ್ಛೆಗೆ ಪೂರಕವಾಗಿ ಮಕ್ಕಳ ಮತ್ತು ಕಾಲೇಜಿನ ಸಮಗ್ರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವ ಭರವಸೆ ನೀಡಿದರು. ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ರಜಾಕ್ ಕೆಮ್ಮಾನ್.ಎ ಮಾತನಾಡಿ ಸ್ಧಳೀಯವಾಗಿ ಈ ವಿಶ್ವವಿದ್ಯಾನಿಲಯ ಕಾಲೇಜು ಆರಂಭದ ವರ್ಷಗಳಿಂದಲೂ ಗುಣಮಟ್ಟದ ಶಿಕ್ಷಣದಿಂದ ಹೆಸರಾಗಿದೆ. ಇಂತಹ ಶಿಕ್ಷಣ ಸಂಸ್ಧೆಯ ರಕ್ಷಕ ಸಂಘದ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಕ್ಕೆ ಹೆಮ್ಮೆಯಿದೆ. ಇಂತಹ ಜವಾಬ್ದಾರಿ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕಾಲೇಜಿನ ಶಿಕ್ಷಕ ಸಂಘದ ಜೊತೆಗೂಡಿ ಉತ್ತಮ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದರು. ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಯೋಜಕರಾದ ಡಾ. ಜಯರಾಜ್.ಎನ್ ಅವರು ಕಾಲೇಜಿನ ಅಭಿವೃದ್ಧಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅವಶ್ಯವಾದಂತಹ ವಾತಾವರಣ ನೀಡುವುದು ಈ ಸಂಘದ ಮುಖ್ಯ ಗುರಿಯಾಗಿದ್ದು ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳೊಂದಿಗೆ ಮುಂದಿನ ದಿನಗಳಲ್ಲಿ ಮಹತ್ವವಾದ ಕಾರ್ಯಗಳನ್ನು ಯೋಜಿಸಲಾಗುತ್ತದೆ ಎಂದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾಗಿರುವ ಡಾ.ಸೀತಾರಾಮ ಪಲ್ಲೋಡಿ ಸ್ವಾಗತಿಸಿದರು. ಖಜಾಂಜಿ ವೆರೋನಿಕ ಪ್ರಭಾ ವಿ.ಪಿ ಅವರು ವಾರ್ಷಿಕ ಆಯವ್ಯಯ ವರದಿ ಮಂಡಿಸಿದರು. ಶಿಕ್ಷಕರು ಮತ್ತು ರಕ್ಷಕರ ನಡುವೆ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಂವಾದ ನಡೆಯಿತು. ಹೊಸ ಪದಾಧಿಕಾರಿಗಳ ಆಯ್ಕೆಯನ್ನು ವಿದ್ಯಾರ್ಥಿ ಕ್ಷೇಮಪಾಲಕ ಡಾ.ನೂರಂದಪ್ಪ ನಿರ್ವಹಿಸಿದರು. ಕಾರ್ಯದರ್ಶಿ ಚಂದ್ರಕಲಾ.ಬಿ ವಂದಿಸಿದರು. ಡೀನಾ ಪಿ.ಪಿ ನಿರೂಪಿಸಿದರು. ದಿವ್ಯಶ್ರೀ ಪ್ರಾರ್ಥಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು.
—ಜಾಹೀರಾತು—