ನೆಲ್ಯಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಸ್ವ ಉತ್ಪನ್ನ ವ್ಯಾಪಾರ ಮೇಳ

ಶೇರ್ ಮಾಡಿ

ನೇಸರ ಮಾ.10: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಸ್ವ ಉತ್ಪನ್ನ ವ್ಯಾಪಾರ ಮೇಳವನ್ನು ಆಯೋಜಿಸಲಾಯಿತು.
ಈ ವ್ಯಾಪಾರ ಮೇಳದಲ್ಲಿ ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾಥಿ೯ಗಳು ಅನೇಕ ಬಗೆಯ ಕರಕುಶಲ ವಸ್ತುಗಳನ್ನು ಹಾಗೂ ವಿವಿಧ ಬಗೆಯ ಆಹಾರ ಪದಾಥ೯ಗಳ ಉತ್ಪನ್ನಗಳನ್ನು, ಸ್ಥಳೀಯ ಪರಿಸರದಲ್ಲಿ ಸಿಗುವ ಹಣ್ಣುಹಂಪಲುಗಳನ್ನು, ವಿವಿಧ ಬಗೆಯ ಹಣ್ಣುಗಳ ಪಾನೀಯಗಳನ್ನು ಸಿದ್ದಪಡಿಸಿಕೊಂಡು ವ್ಯಾಪಾರ ಮೇಳದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾಥಿ೯ಗಳಿಗೆ ಹಾಗೂ ಎಲ್ಲಾ ಉಪನ್ಯಾಸಕ ವೃಂದದವರಿಗೂ ತಮ್ಮ ಉತ್ಪನ್ನಗಳ ಬಗ್ಗೆ ವಿವರಿಸಿ ವಿಕ್ರಯ ಮಾಡಿದರು. ಅನೇಕ ಬಗೆಯ ಸ್ವಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಬಳಕೆಯಾಗುವ ರೀತಿ ಅವುಗಳ ಗುಣಮಟ್ಟದ ಬಗ್ಗೆ ಸೃಜನಶೀಲತೆಯಿಂದ ಪ್ರಸ್ತುತಪಡಿಸಿದ ರೀತಿಯು ಆಕಷ೯ಣೀಯವಾಗಿತ್ತು. ಅತೀ ಹೆಚ್ಚು ವಸ್ತುಗಳನ್ನು ವ್ಯಾಪಾರ ಮಾಡುವುದರ ಮೂಲಕ ಪ್ರಜ್ಞಾ ಮತ್ತು ಅವರ ತಂಡ ಪ್ರಥಮ ಸ್ಥಾನವನ್ನು, ಅನುಷ ಮತ್ತು ಅವರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ವಾಣಿಜ್ಯ ಸಂಘದ ಸಂಚಾಲಕರಾದ ದಿವ್ಯ.ಕೆ ಯವರು ಸ್ವಉತ್ಪನ್ನ ವ್ಯಾಪಾರ ಮೇಳದ ಕುರಿತು ಮಾಗ೯ದಶ೯ನವನ್ನು ನೀಡಿದರು.

ಉಪನ್ಯಾಸಕರಾದ ವೆರೋನಿಕ ಪ್ರಭ, ಡಾ.ನೂರೋಂದಪ್ಪ, ಶೃತಿ ಯವರು ವಿದ್ಯಾಥಿ೯ಗಳಿಗೆ ಸ್ವಉತ್ಪನ್ನ ವ್ಯಾಪಾರ ಸಂದಭ೯ದಲ್ಲಿ ಗ್ರಾಹಕರೊಂದಿಗಿನ ಮಾತು ಕತೆ, ಭಾಷೆ, ಓಡನಾಟ ಕುರಿತು ಅರಿವು ಮೂಡಿಸಿದರು.

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!