ಪಂಜ: ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹಾಗೂ ಪರಿಣಾಮಕಾರಿ ಓದು ತರಬೇತಿ

ಶೇರ್ ಮಾಡಿ

ನೇಸರ ಮಾ.10: ಜೇಸಿಐ ಪಂಜ ಪಂಚಶ್ರೀ ಮತ್ತು ಮುಡೂರ್ ಇನ್ಫೋಟೆಕ್ ಆಶ್ರಯದಲ್ಲಿ ಪ್ರೇರಣಾ ಶೈಕ್ಷಣಿಕ ಸರಣಿ ತರಬೇತಿ ಕಾರ್ಯಕ್ರಮದಡಿಯಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹಾಗೂ ಪರಿಣಾಮಕಾರಿ ಓದು ತರಬೇತಿ ಕಾರ್ಯಕ್ರಮವು ದಿನಾಂಕ 10.03.2022 ಗುರುವಾರದಂದು ಸರಕಾರಿ ಪದವಿಪೂರ್ವ ಕಾಲೇಜು ಪಂಜ ಇದರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಲಾಯಿತು.

ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಂಜದ ನಿವೃತ್ತ ಸಹ ಶಿಕ್ಷಕಿಯಾಗಿರುವ ಶ್ರೀಮತಿ ಗಿರಿಜಾ ಕೆದಿಲ ಭಾಗವಹಿಸಿದ್ದರು. ಸಭಾಧ್ಯಕ್ಷತೆ ಯನ್ನು ಜೆಸಿಐ ಪಂಜ ಪಂಚಶ್ರೀ ಯ ಘಟಕಾಧ್ಯಕ್ಷರು ಆಗಿರುವ ಜೇಸಿ.ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ವೇದಿಕೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇದರ ಪ್ರಾಂಶುಪಾಲರಾದ ವೆಂಕಪ್ಪಗೌಡ ಕೇನಾಜೆ ವಲಯ ತರಬೇತುದಾರರಾದ ಜೇಸಿ.ಸವಿತಾರ ಮುಡೂರು, ಜೇಸಿ.ಸೋಮಶೇಖರ ನೇರಳ ಮತ್ತು ಕಾರ್ಯಕ್ರಮ ನಿರ್ದೇಶಕ ಜೇಸಿ.ಗಗನ್ ಕಿನ್ನಿಕುಮೇರಿ ಉಪಸ್ಥಿತರಿದ್ದರು.

ಘಟಕದ ಪೂರ್ವ ಅಧ್ಯಕ್ಷ ಜೇಸಿ.ನಾಗಮಣಿ ಕೆದಿಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೇಸಿ.ಪ್ರವೀಣ್ ಕಾಯರ ಜೇಸಿವಾಣಿ ನುಡಿದರು. ಜೇಸಿ.ಅಶ್ವಥ್ ಬಾಬ್ಲುಬೆಟ್ಟು, ಜೇಸಿ.ಸುಬ್ರಹ್ಮಣ್ಯ ಕಕ್ಯಾನ, ಜೇಸಿ.ಗಗನ್ ಕಿನ್ನಿಕುಮೇರಿ ತರಬೇತುದಾರರನ್ನು ಮತ್ತು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಜೇಸಿ.ವಾಚಣ್ಣ ಕೆರೆಮೂಲೆ ಧನ್ಯವಾದ ಸಮರ್ಪಣೆ ಮಾಡಿದರು. ವಲಯ ತರಬೇತುದಾರರಾದ ಜೇಸಿ.ಸವಿತಾರ ಮುಡೂರು ಹಾಗೂ ಜೇಸಿ.ಸೋಮಶೇಖರ ನೇರಳ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.

—ಜಾಹೀರಾತು—

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!