ನೇಸರ ಮಾ.10: ವಿದ್ಯಾರ್ಥಿ ಜೀವನದಲ್ಲಿ ಗುರಿ ಹಾಗೂ ಸಾಧಿಸುವ ಛಲ ಇರಬೇಕು ಆಗ ಯಶಸ್ಸು ಖಂಡಿತ ಎಂದು ವೆ| ರೆ| ಸ್ಕರಿಯಾ ರಂಬಾನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅದೇ ರೀತಿ ಶಿಕ್ಷಕರು ಸಮಾಜಕ್ಕೆ ನೀಡುವ ಮಹತ್ವದ ಕೊಡುಗೆಯ ಬಗ್ಗೆಯೂ ಶ್ಲಾಘಿಸಿ ಮಾತನಾಡಿದರು. ಅವರು ಜ್ಞಾನೋದಯ ಬೆಥನಿ ಪಿ.ಯು.ಕಾಲೇಜು ನೆಲ್ಯಾಡಿಯಲ್ಲಿ ನಡೆದ ಸೇವೆಯಿಂದ ನಿರ್ಗಮಿಸುತ್ತಿರುವ ಶಿಕ್ಷಕರಿಗೆ ವಿದಾಯ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ|ತೋಮಸ್ ಬಿಜಿಲಿ ವಹಿಸಿದ್ದರು. ವೇದಿಕೆಯಲ್ಲಿ ಸಾಪಿಯೆನ್ಶಿಯಾ ಬೆಥನಿ ಫಸ್ಟ್ ಗ್ರೇಡ್ ಕಾಲೇಜಿನ ಉಪ ಪ್ರಾಂಶುಪಾಲರಾದ ರೆ|ಫಾ| ಜಿಜನ್ ಅಬ್ರಹಾಂ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಗಂಗಾಧರ ಶೆಟ್ಟಿ, ಜ್ಞಾನೋದಯ ಬೆಥನಿ ಪಿ.ಯು. ಕಾಲೇಜಿನ ಉಪಪ್ರಾಂಶುಪಾಲರಾದ ಜೋಸ್ ಎಂ.ಜೆ. ಜ್ಞಾನೋದಯ ಬೆಥನಿ ಪಿ.ಯು.ಕಾಲೇಜಿನ ಉಪಪ್ರಾಂಶುಪಾಲರಾದ ಸುಶಿಲ್ ಕುಮಾರ್, ಹೈಸ್ಕೂಲ್ ವಿಭಾಗದ ಮುಖ್ಯಗುರುಗಳಾದ ಜೋರ್ಜ್ ಕೆ ತೋಮಸ್ , ಪ್ರಾಥಮಿಕ ವಿಭಾಗದ ಮುಖ್ಯ ಗುರುಗಳಾದ ಜೋಸ್ ಪ್ರಕಾಶ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯಿಂದ ಸೇವಾ ನಿವೃತ್ತಿ ಪಡೆದು ವಿದಾಯಗೊಳ್ಳುತ್ತಿರುವ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಜೆಸ್ಸಿ ವರ್ಗೀಸ್ ಹಾಗೂ ಶ್ರೀಮತಿ ವೀಣಾ ರವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ ಮುಂದಿನ ಜೀವನ ಸಂತೋಷದಾಯಕವಾಗಿರಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಅಂಗವಾಗಿ ಪ್ರತಿ ತರಗತಿಯಿಂದ ಆಯ್ಕೆಯಾದ ಓರ್ವ ವಿದ್ಯಾರ್ಥಿಗೆ ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು ಹಾಗೂ ಉತ್ತಮ ನಾಯಕತ್ವವನ್ನು ನೀಡಿ, ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿರುವ ಶಾಲಾ ನಾಯಕ ಶೆರ್ವಿನ್ ಶಾಜಿ ಯವರನ್ನು ಪ್ರಾಂಶುಪಾಲರು ವಿಶಿಷ್ಟ ಪುರಸ್ಕಾರವನ್ನು ನೀಡಿ ಗೌರವಿಸಿದರು.
ಶಾಲಾ ಶಿಕ್ಷಕವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಿಕ್ಷಕಿ ಅಕ್ಷತಾ ರವರು ನಿರ್ವಹಿಸಿದರು. ಸೇವೆಯಿಂದ ವಿದಾಯ ಗೊಳ್ಳುತ್ತಿರುವ ಶಿಕ್ಷಕಿಯರ ಪರಿಚಯವನ್ನು ಶಿಕ್ಷಕಿ ಶ್ರೀಮತಿ ಎಲಿಜಬೆತ್ ನೆರವೇರಿಸಿದರು. ಕುಮಾರಿ ಜೈನಾಬು ಫಿದಾ ಸ್ವಾಗತಿಸಿ. ಕುಮಾರಿ ಮೋನಿಷಾ ರವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಕ್ರಿಸ್ಮ ರವರು ನಡೆಸಿಕೊಟ್ಟರು.
—ಜಾಹೀರಾತು—