ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಬಾಲಕ-ಬಾಲಕಿಯರ ತಂಡ ತ್ರೋಬಾಲ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಬಾಲಕ ಮತ್ತು ಬಾಲಕಿಯರ ತಂಡಗಳು ಅದ್ಭುತ ಸಾಧನೆ ಮೆರೆದಿದ್ದು, ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಸೆ. 9ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಆತಿಥೇಯ ತಂಡವನ್ನು ಸೋಲಿಸಿ, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾರ್ಥಿಗಳ ತಂಡಗಳು ಜಯಭೇರಿ ಬಾರಿಸಿದೆ.

ಬಾಲಕರ ವಿಭಾಗದಲ್ಲಿ ಅಫ್ಲಾಲ್ ಹಾಗೂ ಬಾಲಕಿಯರ ವಿಭಾಗದಲ್ಲಿ ಹರ್ಷಾ ಸರ್ವಾಂಗೀಣ ಆಟಗಾರರಾಗಿ ಆಯ್ಕೆಯಾಗಿದ್ದು, ತಮ್ಮ ವೈಯಕ್ತಿಕ ಪ್ರತಿಭೆಯಿಂದ ಪ್ರಶಸ್ತಿ ಪಡೆದು ಮೆರೆದಿದ್ದಾರೆ. ಈ ಸಾಧನೆಯ ಹಿಂದೆ ದೈಹಿಕ ಶಿಕ್ಷಣ ನಿರ್ದೇಶಕರಾದ ಮಹಮ್ಮದ್ ಹಾರಿಸ್ ಅವರ ಕಠಿಣ ಪರಿಶ್ರಮ ಹಾಗೂ ಮಾರ್ಗದರ್ಶನವನ್ನು ನೀಡಿದ್ದರು.

ವಿದ್ಯಾರ್ಥಿಗಳ ಈ ವಿಶೇಷ ಸಾಧನೆಯನ್ನು ಪ್ರಶಂಸಿಸಿ ಸಂಸ್ಥೆಯ ಕಾರ್ಯದರ್ಶಿಗಳಾದ ಫಾ. ಅನೀಶ್ ಪಾರಶೇರಿಲ್, ಸಂಚಾಲಕರಾದ ಫಾ. ನೋಮಿಸ್ ಕುರಿಯಾಕೋಸ್, ಪ್ರಾಚಾರ್ಯರಾದ ಎಂ. ಕೆ. ಏಲಿಯಾಸ್, ಪ್ರೌಢಶಾಲಾ ಮುಖ್ಯಸ್ಥರಾದ ಎಂ. ಐ. ತೋಮಸ್ ಹಾಗೂ ಹರಿಪ್ರಸಾದ್ ಕೆ ಸೇರಿದಂತೆ ಉಪನ್ಯಾಸಕರು, ಶಿಕ್ಷಕ-ಶಿಕ್ಷಕೇತರ ವರ್ಗದವರು ಅಭಿನಂದನೆ ಸಲ್ಲಿಸಿದರು.

  •  

Leave a Reply

error: Content is protected !!