

ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ ಕೆ.ಪ್ರಕಾಶ ಅವರ ಪತ್ನಿ ಓಮನ (53) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಸೆಪ್ಟೆಂಬರ್ 7ರಂದು ಓಮನ ಅವರು ತಾಯಿ ಮನೆಗೆ ಹೋಗಿ ಮರುದಿನ ವಾಪಾಸು ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಆದರೆ ಸೆ.8ರಂದು ಸಂಜೆಗೂ ಅವರು ಮನೆಗೆ ವಾಪಾಸು ಬಾರದ ಕಾರಣ ಕುಟುಂಬಸ್ಥರು ತಾಯಿ ಮನೆಗೆ ವಿಚಾರಿಸಿದಾಗ, ಅಲ್ಲಿ ಕೂಡ ಅವರು ಬಂದಿರಲಿಲ್ಲವೆಂಬ ಮಾಹಿತಿ ದೊರಕಿತು.
ಪತಿ ಪ್ರಕಾಶ, ಮಗ ಹಾಗೂ ನೆರೆಹೊರೆಯವರು ಹುಡುಕಾಡಿದಾಗ, ಓಮನ ಅವರು ತಮ್ಮ ಹಳೆಯ ಮನೆಯಲ್ಲಿ ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಯಿತು.
ಓಮನ ಅವರ ಮರಣವು ಸೆ.7ರ ಬೆಳಿಗ್ಗೆ 10 ಗಂಟೆಯಿಂದ ಸೆ.8ರ ರಾತ್ರಿ 10 ಗಂಟೆಯ ನಡುವೆ ಹೃದಯಾಘಾತದಿಂದ ಅಥವಾ ಇನ್ಯಾವುದೋ ಕಾರಣದಿಂದ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
ಈ ಸಂಬಂಧ ಮೃತ ಮಹಿಳೆಯ ಪತಿ ಕೆ.ಪ್ರಕಾಶ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






