

ನೆಲ್ಯಾಡಿ: ದೇಶದ ಪ್ರಗತಿಗೆ ಕೌಶಲ್ಯ ಭರಿತ ತರಬೇತುದಾರರು ಇಂದು ಅನಿವಾರ್ಯ ಮತ್ತು ಅತೀ ಹೆಚ್ಚು ಬೇಡಿಕೆ ಇದೆ. ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ವೃತ್ತಿಯಲ್ಲಿ ಕಷ್ಟ ಪಟ್ಟು ಹಾಗೂ ಇಷ್ಟ ಪಟ್ಟು ತರಬೇತಿ ಪಡೆದಾಗ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ತಮ್ಮ ತಮ್ಮ ವೃತ್ತಿ ಕೆಲಸದಲ್ಲಿ ಗೌರವ, ಸಮರ್ಪಿತಾ ಭಾವ ಮತ್ತು ಕೆಲಸವೇ ಪೂಜೆ ಆಗಬೇಕು ಎಂದು ನೂತನವಾಗಿ ಬೆಥನಿ ಐಟಿಐ ಸಂಸ್ಥೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದನೆ ಬಿಷಪ್ ಪೋಲಿ ಕಾರ್ಪಸ್ ಪಬ್ಲಿಕ್ ಸ್ಕೂಲ್ ಸಂಚಾಲಕ ಡೀಕನ್ ಜಾರ್ಜ್ ಕೆ.ಎಂ. ಅವರು ಮಾತನಾಡಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕ ಫಾ. ಡಾ. ವರ್ಗೀಸ್ ಕೈಪನಡ್ಕ ಓ.ಐ.ಸಿ. ಅಧ್ಯಕ್ಷತೆ ವಹಿಸಿದರು. ನಿರ್ದೇಶಕ ಫಾ. ಜಾರ್ಜ್ ಸ್ಯಾಮುವೆಲ್ ಓ.ಐ.ಸಿ., ಪ್ರಾಚಾರ್ಯ ಸಜಿ ಕೆ. ತೋಮಸ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಕೋರಿದರು.
ತರಬೇತಿ ಅಧಿಕಾರಿ ಜಾನ್ ಪಿ.ಎಸ್. ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.






