ಮದ್ದೂರು ಗಣೇಶೋತ್ಸವ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಖಂಡಿಸಿ ಕಡಬದಲ್ಲಿ ವಿಹಿಪಿ ಪ್ರತಿಭಟನೆ

ಶೇರ್ ಮಾಡಿ

ಕಡಬ: ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆ ಸೃಷ್ಠಿಸಿದ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿ, ಕಡಬ ಪ್ರಖoಡ ವಿಶ್ವ ಹಿಂದೂ ಪರಿಷತ್ ವತಿಯಿಂದ ಬುಧವಾರ ಕಡಬ ಪಟ್ಟಣದ ಮುಖ್ಯರಸ್ತೆಯ ಪಂಜಕ್ರಾಸ್ ಬಳಿ ಭಾರಿ ಪ್ರತಿಭಟನೆ ನಡೆಸಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಡಾ. ಸುರೇಶ್ ಕುಮಾರ್ ಕೂಡೂರು ಮಾತನಾಡಿ ಹಿಂದೂಗಳ ಶ್ರದ್ಧೆಯ ಗಣೇಶೋತ್ಸವ ಮೆರವಣಿಗೆಯ ಮೇಲೆ ಮತಾಂಧ ಪುಂಡರು ವ್ಯವಸ್ಥಿತ ಸಂಚು ರೂಪಿಸಿ ಕಲ್ಲು ತೂರಿದ್ದಾರೆ. ನಮಗೆ ಸೌಹಾರ್ದತೆಯ ಪಾಠ ಬೋಧಿಸುವವರು ಮೊದಲು ಕಲ್ಲು ತೂರಿದವರ ವಿರುದ್ಧ ಧ್ವನಿ ಎತ್ತಬೇಕು. ಹಿಂದೂಗಳೊಡನೆ ಬದುಕಲು ಸಾಧ್ಯವಿಲ್ಲದಿದ್ದರೆ 75 ವರ್ಷಗಳ ಹಿಂದೆ ನಿಮಗೆ ನೀಡಿದ್ದ ಬೇರೆ ವ್ಯವಸ್ಥೆಯಲ್ಲಿಗೆ ಹೋಗಬಹುದು. ನಿರಂತರವಾಗಿ ಹಿಂದೂ ಧರ್ಮ, ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಲೇ ಇದೆ. ಹಿಂದೂ ವಿರೋಧಿಗಳ ಅಟ್ಟಹಾಸ ಮಿತಿ ಮೀರುತ್ತಿದೆ, ಮದ್ದೂರು ಘಟನೆ ಕೇವಲ ಒಂದು ಉದಾಹರಣೆ ಮಾತ್ರ. ದೇಶದಾದ್ಯಂತ ಇಂತಹ ಸಂಚು ನಡೆಯುತ್ತಿದೆ. ಗಲಭೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಈ ಸರಕಾರಕ್ಕೆ ಶಕ್ತಿ, ಧೈರ್ಯ ಇಲ್ಲ. ನಿಜವಾದ ಸೌಹಾರ್ದ ಬಯಸುವವರಾದರೆ ನಮ್ಮೊಂದಿಗೆ ಪ್ರತಿಭಟನೆ ನಡೆಸಿ, ಪುಲ್ವಾಮಾದಲ್ಲಿ ಧರ್ಮ ಕೇಳಿ ಗುಂಡಿಕ್ಕಿದವರ ವಿರುದ್ಧ ಧ್ವನಿ ಎತ್ತಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಾಸ್ತ್ಯ ರೈ ಮಾತನಾಡಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಹಿಂದೂ ಸಮಾಜ ಯಾವತ್ತೂ ಇತರ ಧರ್ಮೀಯರ ಆಚರಣೆಯ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಸಂಘಟನೆಗಳೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತವೆ ಎಂದು ಸುಳ್ಳು ಆರೋಪ ಮಾಡುತ್ತಾರೆ. ಮದ್ದೂರಿನಲ್ಲಿ ನಿಮ್ಮ ಶಾಂತಿದೂತರು ಮಾಡಿದ ಕೃತ್ಯದ ಬಗ್ಗೆ ಅವರು ಯಾಕೆ ಬಾಯಿ ತೆರೆಯುವುದಿಲ್ಲ? ಎಂದು ಪ್ರಶ್ನಿಸಿದರು.

ಪ್ರತಿಭಟನಾ ಸಭೆಯಲ್ಲಿ ಕಡಬ ಪ್ರಖoಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೇಪು ಶಿವರಾಮ ಶೆಟ್ಟಿ, ಹಿಂದೂ ಮುಖಂಡರಾದ ರವಿರಾಜ್ ಶೆಟ್ಟಿ ಕಡಬ, ಕಡ್ಯ ವಾಸುದೇವ ಭಟ್, ಜಯಂತ್ ಕಲ್ಲುಗುಡ್ಡೆ, ಪ್ರಮೋದ್ ರೈ ನಂದುಗುರಿ, ಪ್ರಮೀಳಾ ಲೋಕೇಶ್, ಸತ್ಯನಾರಾಯಣ ಹೆಗ್ಡೆ ನಡುಮಜಲು, ಸೀತಾರಾಮ ಗೌಡ ಪೊಸವಳಿಕೆ, ಎ.ಪಿ.ಗಿರೀಶ್, ದೇವಿಪ್ರಸಾದ್ ಮರ್ಧಾಳ, ಸಂತೋಷ್ ಕುಮಾರ್ ಕೋಡಿಬೈಲು, ಅಜಿತ್ ಆರ್ತಿಲ, ರಘುರಾಮ ನಾಯ್ಕ್, ಮೋಹನ ಕೆರೆಕ್ಕೋಡಿ, ಸತೀಶ್ ಕರ್ಮೆಣ, ವಿಶ್ವನಾಥ ರೈ, ಪುರುಷೋತ್ತಮ ಕೊಂಬಾರು, ಮೋಕ್ಷಿತ್ ಕೊಂಬಾರು, ಚೇತನ್ ಬೇರಿಕೆ, ಕಾರ್ತಿಕ್ ಪಿಜಕಳ, ಕಿಶನ್ ರೈ, ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು ಮತ್ತು ಬಿಜೆಪಿ ಮುಖಂಡರು ಮತ್ತಿತರರು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಉಮೇಶ್ ಶೆಟ್ಟಿ ಸಾಯಿರಾಮ್ ಸ್ವಾಗತಿಸಿ ನಿರೂಪಿಸಿದರು. ರಾಧಾಕೃಷ್ಣ ಕೋಲ್ಪೆ ವಂದಿಸಿದರು. ನಂತರ ಕಡಬ ತಹಸೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

  •  

Leave a Reply

error: Content is protected !!