ಆಟೋ ಚಾಲಕನಿಗೆ ಹಲ್ಲೆ: ಇಬ್ಬರು ಟ್ರಾಫಿಕ್ ಪೊಲೀಸರು ಅಮಾನತು

ಶೇರ್ ಮಾಡಿ

ಪುತ್ತೂರು: ಆಟೋ ಚಾಲಕನ ಗಾಡಿ ನಿಲ್ಲಿಸಿದ ಟ್ರಾಫಿಕ್ ಪೊಲೀಸರಿಬ್ಬರು ಚಾಲಕನ ಮೇಲೆ ಶುಕ್ರವಾರ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪೊಲೀಸರನ್ನು ಶನಿವಾರ ಅಮಾನತು ಮಾಡಲಾಗಿದೆ.

ಆಟೋ ರಿಕ್ಷಾ ತಡೆದು ನಿಲ್ಲಿಸಿದ ಪೊಲೀಸರು ಚಾಲಕನ ಮೇಲೆ ಕೈಹಾಕಿ ಹಲ್ಲೆ ಮಾಡಿದ್ದಲ್ಲದೆ, ಅವಾಚ್ಯ ಶಬ್ದ ಗಳಿಂದ ಬೈದಿರುವ ಏಡಿಯೋ ಶುಕ್ರವಾರ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಅಧೀಕ್ಷಕರು ಕ್ರಮ ಕೈಗೊಂಡು ಪುತ್ತೂರು ಸಂಚಾರ ಠಾಣೆಯ ಎಎಸ್‌ಐ ಚಿದಾನಂದ ರೈ ಮತ್ತು ಕಾನ್‌ಸ್ಟೆಬಲ್ ಶ್ರೀಶೈಲ ಎಂ.ಕೆ. ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ಘಟನೆಯ ವಿವರ: ಅ.17ರಂದು ಸಂಜೆ ಆಟೋ ಚಾಲಕ, ಕುರಿಯ ಗ್ರಾಮದ ಬಶೀರ್ ಸಮವಸ್ತ್ರ ಧರಿಸದೆ ವುತ್ತೂರು ನಗರದಲ್ಲಿ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ, ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಚಿದಾನಂದ ರೈ ಮತ್ತು ಶ್ರೀಶೈಲ ಎಂ.ಕೆ. ಅವರು ಕೈಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದರು. ಆದರೆ ಆಟೋ ಚಾಲಕ ವಾಹನ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದಾರೆ. ಹೀಗಾಗಿ ಪೊಲೀಸರಿಬ್ಬರು ತಮ್ಮ ಬೈಕ್‌ನಲ್ಲಿ ಆಟೋ ರಿಕ್ಷಾವನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ. ದರ್ಬೆ ಸಮೀಪ ರಿಕ್ಷಾವನ್ನು ಹಿಂದಿಕ್ಕಿ ಆಟೋರಿಕ್ಷಾ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ರಿಕ್ಷಾ ನಿಂತ ಬೆನ್ನಲ್ಲೇ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೈಮೇಲೆ ಕೈ ಹಾಕಿ ಹಲ್ಲೆ ಮಾಡಿದ್ದಾರೆ.

ಹಠಾತ್ ವೈರಲ್, ರಿಕ್ಷಾಚಾಲಕರ ಪ್ರತಿಭಟನೆ
ಆಟೋ ಚಾಲಕನಿಂದ ಕೀ ಪಡೆದುಕೊಂಡ ಪೊಲೀಸರು ತಾವೇ ಖುದ್ದಾಗಿ ರಿಕ್ಷಾ ಚಲಾಯಿಸಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದರು. ಬಶೀರ್ ತನ್ನದೇ ರಿಕ್ಷಾದ ಹಿಂಬದಿ ಸೀಟಿನಲ್ಲಿ ಕೂತಿದ್ದರು. ವಿಶೇಷವೆಂದರೆ ಆಟೋ ರಿಕ್ಷಾವನ್ನು ಠಾಣೆಗೆ ಕರೆತರುವಷ್ಟರಲ್ಲಿ ವಿಡಿಯೋ ಕೆಲವೇ ಹೊತ್ತಲ್ಲಿ ವೈರಲ್ ಆಗಿತ್ತು. ವೈರಲ್ ಆದ ವಿಡಿಯೋ ಪೊಲೀಸ್ ಸಿಬ್ಬಂದಿಯ ಹಲ್ಲೆ ಕೃತ್ಯಕ್ಕೆ ಸಾಕ್ಷಿ ಹೇಳಿದೆ. ವಿಡಿಯೋ ವೈರಲ್ ಆಗುತ್ತಲೇ ಪೊಲೀಸ್ ಇಲಾಖೆ ಎಚ್ಚೆತ್ತು ತಕ್ಷಣ ಕ್ರಮ ಕೈಗೊಂಡಿದೆ. ಪೊಲೀಸರಿಂದ ಹಲ್ಲೆಗೆ ಒಳಗಾದ ರಿಕ್ಷಾ ಚಾಲಕ ಬಶೀರ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಮಧ್ಯೆ ಶನಿವಾರ ರಿಕ್ಷಾ ಯೂನಿಯನ್ ವತಿಯಿಂದ ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಲಾಯಿತು.

ಮೊಬೈಲ್ ಶೂಟಿಂಗ್:
ಪೊಲೀಸರಿಬ್ಬರು ಬೈಕ್‌ನಲ್ಲಿ ಫಾಲೋ ಮಾಡಿ ಕೊಂಡು ಬರುತ್ತಿರುವುದನ್ನು ರಿಕ್ಷಾ ಚಾಲಕ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಲೇಸಾಗಿದ್ದಾರೆ. ರಿಕ್ಷಾ ನಿಲ್ಲಿಸಿದಾಗ ಪೊಲೀಸರು ಸಮೀಪಿಸುತ್ತಿರುವುದು, ಅವಾಚ್ಯ ಶಬ್ದಗಳಿಂದ ಬೈಯುವುದು ಮತ್ತು ಹಲ್ಲೆ ಮಾಡಿದ್ದು ಎಲ್ಲವನ್ನೂ ಚಿತ್ರೀಕಸಿರಿಸಿ ಕೊಂಡಿದ್ದಾರೆ. ಮೊಬೈಲ್ ಆಫ್ ಮಾಡುವಂತೆ ಪೊಲೀಸರು ತಾ ಕೀತು ಮಾಡುತ್ತಿರುವುದು ಕೂಡ ಮೊಬೈಲ್‌ನಲ್ಲಿ ಚಿತ್ರೀಕರಣಗೊಂಡಿದೆ.

  •  

Leave a Reply

error: Content is protected !!