CPCRI ನಲ್ಲಿ ತೆಂಗಿನ ಮರ ಏರುವ ಹಾಗೂ ಕರಕುಶಲ ತರಬೇತಿ

ಶೇರ್ ಮಾಡಿ

ನೇಸರ ಮಾ.15: CPCRI ನಲ್ಲಿ ಮಾ.09 ರಿಂದ ಮಾ.14ರ ವರೆಗೆ ನಡೆದ ತೆಂಗಿನ ಮರ ಏರುವ ತರಬೇತಿ ಶಿಬಿರ ಮತ್ತು ಕರಕುಶಲ ತರಬೇತಿ ಶಿಬಿರದಲ್ಲಿ ಕೆಎಸ್ಎಸ್ ಮಹಾವಿದ್ಯಾಲಯದ ಒಟ್ಟು 17 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತೆಂಗಿನ ಮರ ಏರುವ ತರಬೇತಿ ಶಿಬಿರದಲ್ಲಿ 13 ವಿದ್ಯಾರ್ಥಿಗಳು ಮತ್ತು ಕರಕುಶಲ ತರಬೇತಿ ಶಿಬಿರದಲ್ಲಿ 4 ವಿದ್ಯಾರ್ಥಿನಿಯರು ಸನತ್ ಪಿ ಎನ್, ಸುಜಿತ್ ಎಂ, ಪ್ರಮೋದ್ ಕುಮರ್ ಟಿ, ಕೌಶಿಕ ಬಿ ಎಸ್, ಸ್ವರಾಜ್ ಎಮ್ ಡಿ, ದಿವಾಕರ ಎನ್, ಸೂರಜ್ ಆರ್, ತನುಶ್ರೀ ಬಿ, ವಿದ್ಯಾಶ್ರೀ ಎ ಎಲ್, ಕೌಶಲ್ಯ ಬಿ ಎಸ್, ಸುಷ್ಮಾ ಎನ್, ಗಣೇಶ ಬಿ, ಲೋಲಾಕ್ಷ ಎಸ್, ಸನತ್, ಸುಪ್ರೀತ್, ದೇವಿದಾಸ್ ಕೆ ಎಸ್, ಹರ್ಷಿತ್ ಯು ಪಾಲ್ಗೊಂಡಿದ್ದರು.

ಶಿಬಿರದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಗರಟೆಯಲ್ಲಿ ತಯಾರಿಸಬಹುದಾದ ಆಕೃತಿಗಳನ್ನು ತಿಳಿಸಿಕೊಟ್ಟರು ಹಾಗೂ ವಿವಿಧ ತೆಂಗಿನ ಸಸಿಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಸ್ವಉದ್ಯೋಗದ ಮಾಹಿತಿಯನ್ನು ನೀಡಲಾಯಿತು. ಶಿಬಿರದ ನಂತರ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ತೆಂಗಿನ ಮರ ಏರುವ ಯಂತ್ರ ಮತ್ತು ವಿದ್ಯಾರ್ಥಿನಿಯರಿಗೆ ಕರಕುಶಲ ತಯಾರಿಸಲು ಬಳಸುವ ಸಲಕರಣೆಗಳನ್ನು ನೀಡಲಾಯಿತು.

—ಜಾಹೀರಾತು—

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!