

ಕಡಬ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಎಸ್.ಎಸ್.ಪಿ.ಯು. ಕಾಲೇಜು, ಸುಬ್ರಹ್ಮಣ್ಯದಲ್ಲಿ ಆಯೋಜಿಸಲಾದ 2025–26ನೇ ಸಾಲಿನ ಅಂತರ್ಕ್ಲಸ್ಟರ್ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರೆಂಜಿಲಾಡಿ ಸಂತೋಮ್ ವಿದ್ಯಾನಿಕೇತನ ವಿದ್ಯಾರ್ಥಿಗಳು ಯೋಗಾಸನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಡಬ, ಶಿರಾಡಿ, ಸುಬ್ರಹ್ಮಣ್ಯ ಉಪಕೇಂದ್ರ ಹಾಗೂ ಆಹ್ವಾನಿತ ತಂಡಗಳ ನಡುವೆ ಸ್ಪರ್ಧೆ ನಡೆಯಿತು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಅಯೋನ್ ಜೋಬ್ ಪ್ರಥಮ, ಕುಮಾರಿ ಅಶ್ವಿತಾ ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಗಗನ್ ದೀಪ್ ಪ್ರಥಮ, ಸಾನ್ಇಸಾ ಜೆಬಿನ್ ದ್ವಿತೀಯ ಇವಾನ ಸಜಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ವಿಜೇಶ್ ಅವರು ನೀಡಿದ್ದು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕವರ್ಗ ಅಭಿನಂದನೆಗಳನ್ನು ಸಲ್ಲಿಸಿದರು.






