ಬೊರುಕಾ ಪವರ್ ಕಾರ್ಪೋರೇಶನ್‌ನಿಂದ ನೇತ್ರಾವತಿ ನದಿಗೆ 15 ಸಾವಿರ ಮೀನಿನ ಮರಿಗಳು

ಶೇರ್ ಮಾಡಿ

ಕೊಕ್ಕಡ: ಪರಿಸರ ಸಂರಕ್ಷಣೆ ಹಾಗೂ ಜಲಜೀವಿಗಳ ರಕ್ಷಣೆಯ ನಿಟ್ಟಿನಲ್ಲಿ ನಿಡ್ಲೆ ಬೊರುಕಾ ಪವರ್ ಕಾರ್ಪೋರೇಶನ್ ಲಿಮಿಟೆಡ್ ಕಂಪನಿಯ ವತಿಯಿಂದ ಜನವರಿ 1ರಂದು ನೇತ್ರಾವತಿ ನದಿಗೆ 15,000 ಮೀನಿನ ಮರಿಗಳನ್ನು ಬಿಡುವ ಕಾರ್ಯಕ್ರಮವನ್ನು ನಡೆಸಲಾಯಿತು.

ಕಂಪನಿಯ ಸಿಬ್ಬಂದಿಗಳ ಮೂಲಕ ಈ ಕಾರ್ಯಾಚರಣೆ ನೆರವೇರಿಸಲಾಯಿತು, ಇದು ಸಂಸ್ಥೆಯ ಪರಿಸರ ಕಾಳಜಿಯ ಭಾಗವಾಗಿದೆ ಎಂದು ಬೊರುಕಾ ಪವರ್ ಕಾರ್ಪೋರೇಶನ್ ಲಿಮಿಟೆಡ್‌ನ ಮ್ಯಾನೇಜರ್ ಗಣೇಶ್ ಶೆಟ್ಟಿ ಅವರು ತಿಳಿಸಿದ್ದಾರೆ. ನದಿಯ ಜೈವ ವೈವಿಧ್ಯತೆ ಕಾಪಾಡುವುದು ಹಾಗೂ ಮೀನು ಸಂಪತ್ತನ್ನು ವೃದ್ಧಿಸುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಬಸವರಾಜ್, ಶ್ರೀಹರಿ ದಂಡು, ಕರುಣ ಸಾಗರ್, ಶರತ್, ಅಶ್ವಥ್ ಕುಮಾರ್, ಬಾಲಕೃಷ್ಣ ಹಾಗೂ ಸಚಿನ್ ಉಪಸ್ಥಿತರಿದ್ದು, ಮೀನಿನ ಮರಿಗಳನ್ನು ನದಿಗೆ ಬಿಡುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

  •  

One thought on “ಬೊರುಕಾ ಪವರ್ ಕಾರ್ಪೋರೇಶನ್‌ನಿಂದ ನೇತ್ರಾವತಿ ನದಿಗೆ 15 ಸಾವಿರ ಮೀನಿನ ಮರಿಗಳು

  1. ಒಳ್ಳೆಯ ಕೆಲಸವೇ ಆದರೆ ಮೀನು ಹಿಡಿಯುವವರು ನದಿಗೆ ಭಾರಿ ಸ್ಪೋಟಕ ಸಿಡಿಮದ್ದು (ತೋಟೆ) ಹಾಕಿ ಸಾವಿರಾರು ಮೀನುಗಳನ್ನು ಕೊಂದು ನೀರನ್ನು ಮಲೀನ ಮಾಡಿ ಸ್ವಲ್ಪ ಮೀನು ಹಿಡಿದು ಉಳಿದದನ್ನು ನದಿಯಲ್ಲೆ ಬಿಟ್ಟು ಹೋಗುತ್ತಾರೆ ಹೀಗೆ ಮಾಡಿದರೆ ಜೀವ ವೈವಿದ್ಯತೆ ಉಳಿಯುವುದು ಹೇಗೆ ?
    ಅದಕ್ಕೆ ಸ್ಪೋಟಕ ಸಿಡಿಮದ್ದು ಹಾಕುವುದನ್ನು ನಿಷೇಧೀಸಿ ಮತ್ತು ಇದಕೊಂದು ಕಾನೂನು ತನ್ನಿ

Leave a Reply

error: Content is protected !!