

ಕೊಕ್ಕಡ: ಪರಿಸರ ಸಂರಕ್ಷಣೆ ಹಾಗೂ ಜಲಜೀವಿಗಳ ರಕ್ಷಣೆಯ ನಿಟ್ಟಿನಲ್ಲಿ ನಿಡ್ಲೆ ಬೊರುಕಾ ಪವರ್ ಕಾರ್ಪೋರೇಶನ್ ಲಿಮಿಟೆಡ್ ಕಂಪನಿಯ ವತಿಯಿಂದ ಜನವರಿ 1ರಂದು ನೇತ್ರಾವತಿ ನದಿಗೆ 15,000 ಮೀನಿನ ಮರಿಗಳನ್ನು ಬಿಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಕಂಪನಿಯ ಸಿಬ್ಬಂದಿಗಳ ಮೂಲಕ ಈ ಕಾರ್ಯಾಚರಣೆ ನೆರವೇರಿಸಲಾಯಿತು, ಇದು ಸಂಸ್ಥೆಯ ಪರಿಸರ ಕಾಳಜಿಯ ಭಾಗವಾಗಿದೆ ಎಂದು ಬೊರುಕಾ ಪವರ್ ಕಾರ್ಪೋರೇಶನ್ ಲಿಮಿಟೆಡ್‌ನ ಮ್ಯಾನೇಜರ್ ಗಣೇಶ್ ಶೆಟ್ಟಿ ಅವರು ತಿಳಿಸಿದ್ದಾರೆ. ನದಿಯ ಜೈವ ವೈವಿಧ್ಯತೆ ಕಾಪಾಡುವುದು ಹಾಗೂ ಮೀನು ಸಂಪತ್ತನ್ನು ವೃದ್ಧಿಸುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಬಸವರಾಜ್, ಶ್ರೀಹರಿ ದಂಡು, ಕರುಣ ಸಾಗರ್, ಶರತ್, ಅಶ್ವಥ್ ಕುಮಾರ್, ಬಾಲಕೃಷ್ಣ ಹಾಗೂ ಸಚಿನ್ ಉಪಸ್ಥಿತರಿದ್ದು, ಮೀನಿನ ಮರಿಗಳನ್ನು ನದಿಗೆ ಬಿಡುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.






