
ಉಪ್ಪಿನಂಗಡಿ: ಪಂಜಳ ಪ್ರದೇಶದಲ್ಲಿ ಹಗಲು ರೌಂಡ್ಸ್ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಪರಿಣಾಮ ಎಂ.ಡಿ.ಎಂ.ಎ. ಮಾದಕ ವಸ್ತು ಸಾಗಾಣಿಕೆ ಶಂಕೆ ಬೆಳಕಿಗೆ ಬಂದ ಘಟನೆ ಫೆ.10ರಂದು ಸಂಜೆ ದಾಖಲಾಗಿದೆ.
ಸಂಜೆ ಸುಮಾರು 6 ಗಂಟೆಯ ಸಮಯದಲ್ಲಿ ಪೊಲೀಸರು ಯಹ್ಯಾ ಕೊಕ್ಕಡ (48) ಎಂಬಾತನನ್ನು ತಪಾಸಣೆ ನಡೆಸಿದ ವೇಳೆ, ವಿಚಾರಣೆಯಲ್ಲಿ ಆತನು ಮಾರಾಟ ಉದ್ದೇಶದಿಂದ ಎಂ.ಡಿ.ಎಂ.ಎ. ಹೊಂದಿದ್ದೇನೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಆತನಿಂದ 2.16 ಗ್ರಾಂ ಎಂ.ಡಿ.ಎಂ.ಎ. (ಅಂದಾಜು ಮೌಲ್ಯ ರೂ.3,000/-), ಒಂದು ಐಫೋನ್ (ರೂ.45,000/-), ಒಂದು ಸ್ಯಾಮ್ಸಂಗ್ ಕೀ–ಪ್ಯಾಡ್ ಮೊಬೈಲ್ (ರೂ.1,000/-) ಒಟ್ಟು ರೂ.49,000/- ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 19/2026, ಕಲಂ 8(ಸಿ), 22(ಬಿ) – ಎನ್‌ಡಿಪಿಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ.









