





ಕೊಕ್ಕಡ: ಕೌಕ್ರಾಡಿ ಗ್ರಾಮದಲ್ಲಿ ದೀರ್ಘಕಾಲದಿಂದ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಸ್ವಯಂ ಉದ್ಯೋಗ ಕ್ಷೇತ್ರದಲ್ಲಿ ಪ್ರೇರಣೆಯಾಗಿರುವ ವಿಶಾಲಾಕ್ಷಿ ಅವರನ್ನು ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್” ಯೋಜನೆಯಡಿ ಗುರುತಿಸಿ ಸನ್ಮಾನಿಸಲಾಯಿತು.
ಜೆಸಿಐ ಕೊಕ್ಕಡ ಕಪಿಲಾ ಘಟಕದ ಅಧ್ಯಕ್ಷ ರಿತೇಶ್ ಎಂ. ಸ್ಟ್ರೆಲ್ಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಧನುಷ್ ಕುಮಾರ್ ಜೈನ್ ಅವರು ಸನ್ಮಾನಿತರನ್ನು ಪರಿಚಯಿಸಿ, ಅವರ ಸೇವಾ ಸಾಧನೆಗಳನ್ನು ವಿವರಿಸಿದರು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ದೀಪಾ ವಿ. ಅವರು ವಾಚಿಸಿದರು.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ನಿಕಟಪೂರ್ವ ಅಧ್ಯಕ್ಷೆ ಡಾ.ಶೋಭಾ ಪಿ., ಲೇಡಿ ಜೆಸಿ ಅಧ್ಯಕ್ಷ ರೇಶ್ಮಿ ಡಿಸೋಜ, ಕೆ.ಶ್ರೀಧರ ರಾವ್, ಸಂತೋಷ್ ಜೈನ್, ಜೆಸಿಂತಾ ಡಿಸೋಜ, ಜೋಸೆಫ್ ಪಿರೇರಾ, ವಿಕ್ಟರ್ ಸುವಾರಿಸ್, ಚಂದನಾ ಜೈನ್ ಹಾಗೂ ದಕ್ಷಾ ಜೈನ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಜೋಯಲ್ ಪಿರೇರಾ ವಂದಿಸಿದರು.





