ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಭೆ; ವಲಯ ಉಪಾಧ್ಯಕ್ಷರ ಅಧಿಕೃತ ಭೇಟಿ

ಶೇರ್ ಮಾಡಿ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಮಾರ್ಚ್ ತಿಂಗಳ ಸಾಮಾನ್ಯ ಸಭೆಯು ಹಾಗೂ ವಲಯ ಉಪಾಧ್ಯಕ್ಷರ ಮೊದಲ ಅಧಿಕೃತ ಭೇಟಿ ಮಾ.25ರಂದು ಕೊಕ್ಕಡದ ಎಜುನೆಸ್ಟ್ ಅಕಾಡೆಮಿ ಕೇಂದ್ರದಲ್ಲಿ ನೆರವೇರಿತು. ಸಭೆಗೆ ಘಟಕದ ಅಧ್ಯಕ್ಷರಾದ ರಿತೇಶ್ ಎಂ. ಸ್ಟ್ರೆಲ್ಲಾ ಅಧ್ಯಕ್ಷತೆ ವಹಿಸಿದರು.

ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಅವರು ಘಟಕದ ಅಭಿವೃದ್ಧಿ ಹಾಗೂ ಆಡಳಿತ ನಿರ್ವಹಣೆ ಕುರಿತ ತರಬೇತಿಯನ್ನು ನೀಡಿದರು. ಈ ವೇಳೆ ಮಾತನಾಡಿದ ಅವರು, ಸಮಾಜದ ಒಳಿತಿಗಾಗಿ ಸುಸ್ಥಿರ ಪರಿಹಾರ ಯೋಜನೆಗಳನ್ನು ರೂಪಿಸುವುದರ ಜೊತೆಗೆ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ಕಲ್ಪಿಸುವ “ಕಾಬೀಲ್” ಯೋಜನೆಯನ್ನು ಜಾರಿಗೊಳಿಸುವಂತೆ ಸಲಹೆ ನೀಡಿದರು. ಕೊಕ್ಕಡ ಕಪಿಲಾ ಘಟಕವು 10% ಬೆಳವಣಿಗೆಯನ್ನು ದಾಖಲಿಸಿರುವುದಕ್ಕಾಗಿ ಘಟಕದ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ಮುಂಬರುವ ವಲಯ ಮಟ್ಟದ ಪುತ್ತೂರಿನಲ್ಲಿ ನಡೆಯುವ ಸಿ.ಎ.ಪಿ.ಪಿ. ಹಾಗೂ ಕಾಪುವಿನಲ್ಲಿ ನಡೆಯುವ ಕಡಲೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ಫಲ್ಗುಣಿ ಪ್ರಾಂತ್ಯದಲ್ಲಿ ಸದಸ್ಯತ್ವದ ಬೆಳವಣಿಗೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಅವರನ್ನು ಸನ್ಮಾನಿಸಲಾಯಿತು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ದೀಪಾ ವಿ. ಅವರು ವಾಚಿಸಿದರು.

ಮಾರ್ಚ್ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿದ ಜಸ್ವಂತ್ ಪಿರೇರಾ, ವಿಯೋನ್ ಸುವಾರಿಸ್, ಪ್ರಜ್ವಲ್ ಲೋಬೊ, ಜೋಸೆಫ್ ಪಿರೇರಾ ಮತ್ತು ಕೆ.ಶ್ರೀಧರ ರಾವ್ ಅವರಿಗೆ ಶುಭಾಶಯ ಕೋರಲಾಯಿತು.

ತರಬೇತಿ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ.ಶೋಭಾ ಪಿ., ಲೇಡಿ ಜೆಸಿ ಅಧ್ಯಕ್ಷ ರೇಶ್ಮಿ ಡಿಸೋಜ, ಜೆಸಿಂತಾ ಡಿಸೋಜ, ಧನುಷ್ ಕುಮಾರ್ ಜೈನ್, ವಿಕ್ಟರ್ ಸುವಾರಿಸ್, ಸಂತೋಷ್ ಜೈನ್, ಚಂದನಾ ಜೈನ್ ಹಾಗೂ ದಕ್ಷಾ ಜೈನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೋಯಲ್ ಪಿರೇರಾ ವಂದಿಸಿದರು.

Leave a Reply

error: Content is protected !!