





ಸೌತಡ್ಕ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾ.28ರಂದು ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಅವರ ಪತ್ನಿ ತೇಜಸ್ವಿನಿ ರಾಘವೇಂದ್ರ, ಪುತ್ರ ಸುಭಾಷ್ ರಾಘವೇಂದ್ರ ಹಾಗೂ ಸೊಸೆ ಶ್ರವಣ ಅವರು ಸಹ ಜೊತೆಗಿದ್ದು ದೇವರ ದರ್ಶನ ಪಡೆದರು.
ಬಳಿಕ ದೇವಸ್ಥಾನದ ವತಿಯಿಂದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಬಿ.ವೈ.ರಾಘವೇಂದ್ರ ಅವರಿಗೆ ಶಾಲು ಹೊದಿಸಿ, ದೇವರ ಫೋಟೋ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಸೌತಡ್ಕ ನೈಮಿಷ ವೆಂಚರ್ಸ್ ಮಾಲಕ ಬಾಲಕೃಷ್ಣ ನೈಮಿಷ, ಕೊಕ್ಕಡ ಗ್ರಾಮ ಪಂಚಾಯತ್ನ ಮಾಜಿ ಉಪಾಧ್ಯಕ್ಷ ಪ್ರಭಾಕರ ಮಲ್ಲಿಗೆಮಜಲು, ಲಿಂಗಪ್ಪ ಕಡೀರ, ಪ್ರಶಾಂತ್ ಪೂವಾಜೆ ಉಪಸ್ಥಿತರಿದ್ದರು.





