ನೆಲ್ಯಾಡಿಯಲ್ಲಿ “ಸ್ಟಡ್ ಫೆಸ್ಟ್” ಸಂಭ್ರಮ

ಶೇರ್ ಮಾಡಿ

ಮುಳಿಯ ಸಿಲ್ವರಿಯದಲ್ಲಿ ಕಿವಿಯೋಲೆಗಳ ಅಪೂರ್ವ ಸಂಗ್ರಹ – ಗ್ರಾಹಕರಿಗೆ ಭರ್ಜರಿ ಆಫರ್

 

ನೆಲ್ಯಾಡಿಯಲ್ಲಿ “ಸ್ಟಡ್ ಫೆಸ್ಟ್” ಸಂಭ್ರಮ

ನೆಲ್ಯಾಡಿ: ಪ್ರಸಿದ್ಧ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ & ಡೈಮಂಡ್ಸ್, ಪುತ್ತೂರು ಇದರ ಸಹ ಶಾಖೆಯಾದ ನೆಲ್ಯಾಡಿ ಮುಳಿಯ ಸಿಲ್ವರಿಯಾದಲ್ಲಿ ಏ.6ರಿಂದ ಭರ್ಜರಿಯಾಗಿ “ಸ್ಟಡ್ ಫೆಸ್ಟ್” ಆರಂಭವಾಗಿದೆ. ಕಿವಿಯೋಲೆಗಳ ವೈವಿಧ್ಯಮಯ ಸಂಗ್ರಹದ ಮೂಲಕ ಈ ಫೆಸ್ಟ್ ಸ್ಥಳೀಯ ಗ್ರಾಹಕರ ಗಮನ ಸೆಳೆಯುತ್ತಿದೆ.

ಈ ವಿಶೇಷ ಹಬ್ಬದ ಪ್ರಮುಖ ಆಕರ್ಷಣೆ ಎಂದರೆ, ಅಪೂರ್ವ ಮತ್ತು ಆಕರ್ಷಕ ವಿನ್ಯಾಸದ ಕಿವಿಯೋಲೆಗಳ ಸಂಗ್ರಹ, ಲೈಟ್ ವೈಟ್ ಕಿವಿಯೋಲೆಗಳು, ಮಕ್ಕಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಹೊಸ ಮಾದರಿಯ ಕಿವಿಯೋಲೆಗಳು, ಇಂದಿನ ಟ್ರೆಂಡಿಂಗ್‌ನಲ್ಲಿ ಇರುವ ಎಲ್ಲಾ ಮಾದರಿಗಳ ಸ್ಟಡ್ಸ್, ಪ್ರತಿ ವಯಸ್ಸಿನವರಿಗೂ ಹೊಂದುವಂತೆ ವಿವಿಧ ವಿನ್ಯಾಸಗಳಲ್ಲಿ ಕಿವಿಯೋಲೆಗಳು ಲಭ್ಯವಿದ್ದು, ಫ್ಯಾಷನ್ ಪ್ರಿಯರಿಗಾಗಿ ಇದು ಒಂದು ಸುವರ್ಣಾವಕಾಶವಾಗಿದೆ.

ಗ್ರಾಹಕರನ್ನು ಆಕರ್ಷಿಸುವ ಮತ್ತೊಂದು ವಿಶೇಷವೆಂದರೆ, ಆಫರ್ ದರದಲ್ಲಿ ಮಾರಾಟ, ಹಳೆಯ ಚಿನ್ನವನ್ನು ನೀಡಿ, ಹೊಸ ವಿನ್ಯಾಸದ ಕಿವಿಯೋಲೆಗಳನ್ನು ಪಡೆಯುವ ಅವಕಾಶ, ಈ ಮೂಲಕ ಗ್ರಾಹಕರು ಕಡಿಮೆ ಖರ್ಚಿನಲ್ಲಿ ಹೊಸ ಟ್ರೆಂಡಿ ಆಭರಣಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಏ.6ರಿಂದ ಆರಂಭವಾದ ಈ ಕಿವಿಯೋಲೆಗಳ ಮಾರಾಟ ಹಬ್ಬವು ನೆಲ್ಯಾಡಿಯಲ್ಲಿ ಆಭರಣ ಪ್ರಿಯರಿಗೆ ವಿಶೇಷ ಖರೀದಿ ಉತ್ಸವದಂತಾಗಿದೆ. ಅಪರೂಪದ ಸಂಗ್ರಹ, ಆಕರ್ಷಕ ದರ ಹಾಗೂ ವಿನ್ಯಾಸಗಳ ವೈವಿಧ್ಯತೆ ಅನುಭವವನ್ನು ನೀಡುತ್ತಿದೆ. ನೆಲ್ಯಾಡಿ ಮುಳಿಯ ಸಿಲ್ವರಿಯಾಗೆ ಭೇಟಿ ನೀಡಿ, ನಿಮ್ಮ ಮೆಚ್ಚಿನ ಕಿವಿಯೋಲೆಗಳನ್ನು ಆರಿಸಿ, ಈ “ಸ್ಟಡ್ ಫೆಸ್ಟ್” ಸಂಭ್ರಮವನ್ನು ಅನುಭವಿಸಿ.

 

Leave a Reply

error: Content is protected !!