ನೇಸರ ಮಾ.21:ಭರತನಾಟ್ಯ -ಸಂಗೀತ-ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕಡಬ ತಾಲೂಕಿನ ಶೀರಾಡಿ ಗ್ರಾಮದ ಸಂಪ್ಯಾಡಿಯ ಅರ್ಚನಾ ಎಸ್ ಇವರು “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ಕರ್ನಾಟಕ“, ಇದರ 3 ನೇಯ ರಾಜ್ಯ ಅಧಿವೇಶನದ ಅಂಗವಾಗಿ ದಿನಾಂಕ 20 -03 -2022 ನೇ ಭಾನುವಾರದಂದು ಶ್ರೀ ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ತನ್ನ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು .
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ,ಹರೀಶ್ ಪೂಂಜಾ ,ಶಾಸಕರು ,ಬೆಳ್ತಂಗಡಿ ತಾಲೂಕು ಹಾಗೂ ಹಲವು ಗಣ್ಯರ ಉಪಸ್ಥಿತಿಯಲ್ಲಿ “ಅಭಿನಂದನಾ ಪತ್ರ ” ವನ್ನು ಸ್ವೀಕರಿಸಿದರು .
ಇವರು ಉದನೆಯ ಬಿಷಪ್ ಪಾಲಿಕಾರ್ಪೋಸ್ ಪಬ್ಲಿಕ್ ಸ್ಕೂಲಿನ 5 ನೇ ತರಗತಿಯ ವಿದ್ಯಾರ್ಥಿನಿ.ಸುದರ್ಶನ್ -ರಮ್ಯಾ ದಂಪತಿಯ ಮಗಳಾದ .ಈಕೆಯು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ,ನಟವರ್ಯ ಡಾನ್ಸ್ ಸ್ಟುಡಿಯೋ ನೆಲ್ಯಾಡಿ,ಲತೇಶ್ ಯಕ್ಷಗಾನ ಕಲಿಕಾ ಕೇಂದ್ರ ಅರಸಿನಮಕ್ಕಿ ಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.
ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ
—ಜಾಹೀರಾತು—