ಅರ್ಚನಾ.ಎಸ್.ಸಂಪ್ಯಾಡಿ ಇವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ),ಕರ್ನಾಟಕ ವತಿಯಿಂದ “ಅಭಿನಂದನಾ ಪತ್ರ “

ಶೇರ್ ಮಾಡಿ

ನೇಸರ ಮಾ.21:ಭರತನಾಟ್ಯ -ಸಂಗೀತ-ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕಡಬ ತಾಲೂಕಿನ ಶೀರಾಡಿ ಗ್ರಾಮದ ಸಂಪ್ಯಾಡಿಯ ಅರ್ಚನಾ ಎಸ್ ಇವರು “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ಕರ್ನಾಟಕ“, ಇದರ 3 ನೇಯ ರಾಜ್ಯ ಅಧಿವೇಶನದ ಅಂಗವಾಗಿ ದಿನಾಂಕ 20 -03 -2022 ನೇ ಭಾನುವಾರದಂದು ಶ್ರೀ ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ತನ್ನ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು .

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ,ಹರೀಶ್ ಪೂಂಜಾ ,ಶಾಸಕರು ,ಬೆಳ್ತಂಗಡಿ ತಾಲೂಕು ಹಾಗೂ ಹಲವು ಗಣ್ಯರ ಉಪಸ್ಥಿತಿಯಲ್ಲಿ “ಅಭಿನಂದನಾ ಪತ್ರ ” ವನ್ನು  ಸ್ವೀಕರಿಸಿದರು .

ಇವರು ಉದನೆಯ ಬಿಷಪ್ ಪಾಲಿಕಾರ್ಪೋಸ್ ಪಬ್ಲಿಕ್ ಸ್ಕೂಲಿನ 5 ನೇ ತರಗತಿಯ ವಿದ್ಯಾರ್ಥಿನಿ.ಸುದರ್ಶನ್ -ರಮ್ಯಾ ದಂಪತಿಯ ಮಗಳಾದ .ಈಕೆಯು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ,ನಟವರ್ಯ ಡಾನ್ಸ್ ಸ್ಟುಡಿಯೋ ನೆಲ್ಯಾಡಿ,ಲತೇಶ್ ಯಕ್ಷಗಾನ ಕಲಿಕಾ ಕೇಂದ್ರ ಅರಸಿನಮಕ್ಕಿ ಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.

ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

 

 
ನೆಲ್ಯಾಡಿ ರಾಮನಗರ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ

ಜಾಹೀರಾತು

Leave a Reply

error: Content is protected !!